ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಶನಿವಾರ ನಡೆದ ನೌಕರರ ದಿನದ ಆಚರಣೆಗೆ ಪಾಲಿಕೆ ವತಿಯಿಂದ ₨ 25 ಲಕ್ಷ ನೀಡಲಾಗಿದ್ದು, ಬಿಬಿಎಂಪಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಸಾರ್ವಜನಿಕರ ಹಣ ಬಳಸಿ ಅದ್ಧೂರಿಯಾಗಿ ನೌಕರರ ದಿನವನ್ನು ಆಚರಿಸುವ ಅಗತ್ಯವೇನಿತ್ತು ಎಂಬ ಟೀಕೆ ವ್ಯಕ್ತವಾಗಿದೆ.

ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುತ್ತಿದ್ದ ಕೆಂಪೇಗೌಡ ದಿನಾಚರಣೆಯ ಮೊದಲ ದಿನ ನೌಕರರ ದಿನವನ್ನು ಆಚರಿಸಲಾಗುತ್ತಿತ್ತು. ಈ ವರ್ಷ ಕೆಂಪೇಗೌಡ ದಿನಾಚರಣೆಯ ಜತೆಗೆ ನೌಕರರ ದಿನವನನ್ನು ಆಚರಿಸದೆ, ಪ್ರತ್ಯೇಕವಾಗಿ ನೌಕರರ ದಿನಾಚರಣೆ ಆಚರಿಸಲಾಗಿದೆ.

‘ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ದಿನಗಳಲ್ಲಿ ಅದ್ಧೂರಿಯಾಗಿ ನೌಕರರ ದಿನವನ್ನು ಆಚರಿಸಿರುವುದು ಸರಿಯಲ್ಲ. ದುಂದುವೆಚ್ಚವಿರಲಿ, ವೆಚ್ಚ ಮಾಡುವಾಗಲೇ ಅಳೆದು ತೂಗಬೇಕಾದ ಸ್ಥಿತಿ ಬಿಬಿಎಂಪಿಯಲ್ಲಿದೆ. ಹೀಗಿರುವಾಗ ₨ 25 ಲಕ್ಷ ಖರ್ಚು ಮಾಡಿ ನೌಕರರ ದಿನವನ್ನು ಆಚರಿಸಿರುವುದು ನೌಕರರ ಮನಃಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ಮಾಜಿ ಮೇಯರ್ ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘಕ್ಕೆ ಕಳೆದ ಆರು ವರ್ಷದಿಂದ ₨ 25 ಲಕ್ಷ ಅನುದಾನ ನೀಡುತ್ತಾ ಬರಲಾಗಿದೆ. ಹಿಂದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಈ ಹಣವನ್ನು ಸಂಘ ಬಳಸಿಕೊಳ್ಳುತ್ತಿತ್ತು. ಈ ವರ್ಷ ನೌಕರರ ದಿನವನ್ನು ಆಚರಿಸಲು ಅನುದಾನದ ಹಣ ಬಳಸಿಕೊಂಡಿದ್ದಾರೆ’ ಎಂದು ಮೇಯರ್ ಬಿ.ಎಸ್. ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನೌಕರರ ದಿನಾಚರಣೆ ಮಾಡುತ್ತಿದ್ದಾರೆ ಎಂಬ ಟೀಕೆಗಳು ಈಗ ವ್ಯಕ್ತವಾಗಿವೆ. ಇದು ದುಂದುವೆಚ್ಚವಲ್ಲ. ಆದರೂ ನೌಕರರೇ ವೇತನದಿಂದ ₨ 200 ದೇಣಿಗೆ ನೀಡಿದ್ದರೆ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಬಹುದಿತ್ತು. ಪಾಲಿಕೆಯ ಅನುದಾನವನ್ನು ಕಾರ್ಯಕ್ರಮಕ್ಕಾಗಿ ಬಳಸಿದ್ದು ಸರಿಯಲ್ಲ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಬಿಬಿಎಂಪಿ ವಿಸ್ತೀರ್ಣ ಹೆಚ್ಚಾಗಿದ್ದರೂ 25 ವರ್ಷಗಳಿಂದ ಪಾಲಿಕೆಯ ಸಿಬ್ಬಂದಿ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಹೀಗಾಗಿ ಅಗತ್ಯವಿರುವ ಅಧಿಕಾರಿ ಹಾಗೂ ನೌಕರರ ನೇಮಕ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ’ ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.

‘ರಾಜ್ಯ ಸರ್ಕಾರ 2010ರಲ್ಲಿ ಅನುಮತಿ ನೀಡಿರುವಂತೆ ನಾಲ್ಕು ಸಾವಿರ ಪೌರಕಾರ್ಮಿಕರ ನೇಮಕಾತಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ನಗರದಲ್ಲಿ ಬಡವರು ಮನೆ ನಿರ್ಮಿಸಿಕೊಳ್ಳಲು ₨ 4 ಲಕ್ಷ ಸಹಾಯಧನ ಕೊಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₨ 900 ಕೋಟಿ ವಿಶೇಷ ಅನುದಾನ ನೀಡಲಿದೆ’ ಎಂದು ತಿಳಿಸಿದರು.

ಆಯುಕ್ತ ಎಂ.ಲಕ್ಷ್ಮೀನಾರಾಯಣ ಮಾತನಾಡಿ, ‘ಬೆಂಗಳೂರು ಮಾಹಿತಿ ತಂತ್ರಜ್ಞಾನ ನಗರಿ ಎಂದು ಹೆಸರು ಗಳಿಸಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಕೆಲಸದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲು ಸಿದ್ಧರಿಲ್ಲ. ತಂತ್ರಜ್ಞಾನದ ನೆರವಿನಿಂದ ರಸ್ತೆ ಇತಿಹಾಸ ಹಾಗೂ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳು ಬದ್ಧತೆ ತೋರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲಗಂಬಕ್ಕೆ ಎಣ್ಣೆ ಸವರಿದಂತೆ

ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರು ಮಲ್ಲಗಂಬಕ್ಕೆ ಎಣ್ಣೆ ಸವರಿದಂತೆ ನಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡು ಬಂದರೆ ಇದು ನಮ್ಮ ವಿಭಾಗಕ್ಕೆ ಬರುವುದಿಲ್ಲ ಎಂಬ ಉತ್ತರ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಾರೆ. ಬಿಬಿಎಂಪಿ ನಮ್ಮ ಸಂಸ್ಥೆ ಎಂಬ ಭಾವನೆ ಅಧಿಕಾರಿಗಳಲ್ಲಿ ಇಲ್ಲ. ಹೀಗಾದರೆ ಪಾಲಿಕೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ.
– ಬಿ.ಎಸ್. ಸತ್ಯನಾರಾಯಣ, ಮೇಯರ್

ಕಡಿವಾಣ ಹಾಕಲು ತಿಳಿಸಿದ್ದೆ
ನೌಕರರ ದಿನದ ಆಚರಣೆಗೆ ಬಿಬಿಎಂಪಿ ಅನುದಾನವನ್ನು ಬಳಸದಂತೆ ಹಾಗೂ ಕಾರ್ಯಕ್ರಮದ ವೆಚ್ಚಕ್ಕೆ ಕಡಿವಾಣ ಹಾಕುವಂತೆ ಈ ಹಿಂದೆ ಸಂಘದ ಪದಾಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೆ. ಆದರೆ, ಪದಾಧಿಕಾರಿಗಳು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪಾಲಿಕೆಯ ಆರ್ಥಿಕ ಸ್ಥಿತಿ ವಿಷಮವಾಗಿರುವಾಗ ಹೆಚ್ಚಿನ ಹಣ ಖರ್ಚು ಮಾಡಿ ಕಾರ್ಯಕ್ರಮ ನಡೆಸುವ ಅಗತ್ಯವಿರಲಿಲ್ಲ.

– ಎಂ.ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ

ದುಂದು ವೆಚ್ಚ ಮಾಡಿಲ್ಲ
ನೌಕರರೆಲ್ಲರೂ ವರ್ಷದಲ್ಲಿ ಒಂದು ಬಾರಿ ಒಂದೆಡೆ ಸೇರುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ‘ಸಾರ್ವಜನಿಕರು ಮತ್ತು ಅಧಿಕಾರಿಗಳ ಸಂಬಂಧ’, ‘ಒತ್ತಡ ನಿರ್ವಹಣೆ’ ಮತ್ತು ‘ಮಾನವ ಹಕ್ಕುಗಳು’ ವಿಷಯ ಕುರಿತಂತೆ ನೌಕರರಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. ನೌಕರರ ಕುಟುಂಬ ಸದಸ್ಯರಿಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಘದಲ್ಲಿ 5,120 ಮಂದಿ ಸದಸ್ಯರಿದ್ದಾರೆ. ಕಾರ್ಯಕ್ರಮಕ್ಕೆ ಸಂಘದ ಸದಸ್ಯರಿಂದ ಯಾವುದೇ ದೇಣಿಗೆ ಪಡೆದಿಲ್ಲ. ಕಾರ್ಯಕ್ರಮದ ಹೆಸರಿನಲ್ಲಿ ದುಂದುವೆಚ್ಚ ಮಾಡಿಲ್ಲ.
– ಆರ್.ಸುಬ್ರಹ್ಮಣ್ಯಂ, ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.