ಶುಕ್ರವಾರ, ಮೇ 7, 2021
26 °C

ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಅಧಿಕಾರಿಗಳು ಕಾಳಜಿಯಿಂದ ಕೆಲಸ ನಿರ್ವಹಿಸಿ ತಪ್ಪಿದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾದಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನಗರದ ಜಿ.ಪಂ. ಸಭಾಂಗಣದಲ್ಲಿ ಬರ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿದಲ್ಲಿ ಬರ ಎದುರಿಸಲು ಸಾಧ್ಯ. ಜಿಲ್ಲೆಯ ಯಾವುದೇ  ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬರಕೂಡದು. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಹಾಗೂ ಜಿಲ್ಲಾ ಮಟ್ಟದ ಯಾವೊಬ್ಬ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ ಹಾಗೂ ಗೈರು ಹಾಜರಾಗಕೂಡದು ಒಂದು ವೇಳೆ ಹಾಜರಿರದಿದ್ದಲ್ಲಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.ಪಶುಸಂಗೋಪನಾ ಖಾತೆ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ ಜಿಲ್ಲೆಯಲ್ಲಿ ಮೇವಿನ ಕೊರತೆಯಿದೆಯಾ ಎಂದು ಅಧಿಕಾರಿಗಳನ್ನು ಕೇಳಿದಾಗ ಪಶುಸಂಗೋಪನ ಇಲಾಖೆ ನಿರ್ದೆಶಕರು ಸದ್ಯಕ್ಕೆ ಮೇವಿನ ಕೊರತೆಯಿಲ್ಲ ಈಗ ಜಿಲ್ಲೆಯಲ್ಲಿ 5 ಮೇವಿನ ಬ್ಯಾಂಕ್‌ಗಳನ್ನು ಸ್ಥಾಪಿಸಲು ಮತ್ತು ತಾಲ್ಲೂಕಿನ ಸೈದಾಪೂರ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ಪ್ರಾರಂಭಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.ಪ್ರಸ್ತಾವನೆ ಕಳುಹಿಸಲು ವಿಳಂಬ ಬೇಡ ಈಗಾಗಲೆ ನಮ್ಮ ಇಲಾಖೆಯಿಂದ ಅಗತ್ಯವಿದ್ದಲ್ಲಿ ಹೋಬಳಿಗೊಂದರಂತೆ ಮೇವಿನ ಬ್ಯಾಂಕ್‌ಗಳನ್ನು ಸ್ಥಾಪಿಸಬಹುದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಕೂಡಲೇ ಕಾರ್ಯ ಪ್ರವತ್ತರಾಗಿ ಎಂದು ಆದೇಶಿಸಿದರು.ರಾಜೂ ಗೌಡ ಮಾತನಾಡಿ ಅಧಿಕಾರಿಗಳು ಒಂದು ತಂಡವನ್ನು ರಚಿಸಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ  ಪೈಪ್ ಲೈನ್ ಕನೆಕ್ಷನ್, ಕೊಳವೆ ಬಾವಿಗಳ ತೊಂದರೆ ಇದ್ದರೆ ಹಾಗೂ ವಿದ್ಯುತ್‌ಸಮಸ್ಯೆ ಇದ್ದರೆ, ಉಪ್ಪು ನೀರು ಇದ್ದರೆ ಅಲ್ಲಿನ ಜನರ ಪರಿಸ್ಥಿತಿ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚಿಸಿದರು.ತೀವ್ರ ಸಮಸ್ಯೆಯಿರ‌್ದುವ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು.  ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸ ಲಾಗುವುದೆಂದು ಹೇಳಿದರು.ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಬೇಕು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಎಂದರು.ಕೆರೆಗಳ ನೀರು ಬಿಡುವಂತಹ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಸಮಸ್ಯೆಗಳು ಎಲ್ಲರೂ ಸೇರಿ ಕೆಲಸ ನಿರ್ವಹಿಸಿದ್ದರೆ ಆದಷ್ಟು ಬೇಗನೆ ಸಮಸ್ಯೆ ನೀಗಿಸಬಹುದು. ಜಿಲ್ಲೆಯ ಶಾಸಕರು ಹಾಗೂ ಜಿ.ಪಂ. ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ಸಭೆಯ ಗಮನಕ್ಕೆ ತಂದರು.ಲೋಕಸಭಾ ಸದಸ್ಯ ಸಣ್ಣ ಫಕೀರಪ್ಪ, ಜಿಲ್ಲೆಯ ಶಾಸಕರಾದ ಡಾ.ಎ.ಬಿ. ಮಾಲಕರೆಡ್ಡಿ, ಜಿ.ಪಂ. ಅಧ್ಯಕ್ಷೆ ಬಸವರಾಜೇಶ್ವರಿ ತಂಗಡಿ ಜಿ.ಪಂ. ಉಪಾಧ್ಯಕ್ಷೆ ಶರಣಮ್ಮ ಸಾಹುಕಾರ, ಗ್ರಾಮೀಣ ಅಭಿವದ್ಧಿ ಪಂಚಾಯತ್ ರಾಜ್ ಇಲಾಖೆಯ ಜಂಟಿ ನಿರ್ದೇಶಕರದ ಡಾ. ರವಿ ಶಂಕರ, ಜಿಲ್ಲಾಧಿಕಾರಿ ಗುರುನೀತ್ ತೇಜ್ ಮೆನನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಅಬ್ದುಲ್ ರಬ್,  ಜಿ.ಪಂ. ಸದಸ್ಯರು  ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.