ಬೆಂಗಳೂರು: ‘ಶಾಸಕ ಅಪ್ಪಚ್ಚು ರಂಜನ್ ಮತ್ತು ವಿಧಾನಸಭೆ ಸಭಾಪತಿ ಕೆ.ಜೆ.ಬೋಪಯ್ಯ ಅವರು ಅಧಿಕಾರಿಗಳ ಮೂಲಕ ಮಡಿಕೇರಿಯ ಹೊಳದ ಕಾಡು ಪೈಸಾರಿ ಗ್ರಾಮದ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ನೆಟ್ವರ್ಕ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಡೆಮಾಕ್ರಸಿ ಸಂಘಟನೆ ಸದಸ್ಯ ಸುನೀಲ್ ಆರೋಪಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹೊಳದ ಕಾಡು ಪೈಸಾರಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಮಾ. 8ರಂದು ಗ್ರಾಮಪಂಚಾಯ್ತಿ ಎದುರು ಪ್ರತಿಭಟನೆ ಮಾಡಿದರು.

ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿದರು. ನಂತರ ಬಂಧಿತರ ಬಿಡುಗಡೆಗೆ ಜಾಮೀನು ನೀಡದಂತೆ ಶಾಸಕರು ಮತ್ತು ಸಭಾಪತಿಗಳು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ’ ಎಂದು ದೂರಿದರು. ‘ಹೊಳದ ಕಾಡು ಪೈಸಾರಿ ಗ್ರಾಮದ ಜನರ ಸಂಚಾರಕ್ಕೆ ಈ ರಸ್ತೆ ಬಿಟ್ಟರೆ ಬೇರೆ ಯಾವುದೇ ಮಾರ್ಗಗಳಿಲ್ಲ. ಇರುವ ಒಂದು ರಸ್ತೆಯನ್ನು ಕೆಲ ಶ್ರೀಮಂತ ವರ್ಗದ ಜನರು ಅಕ್ರಮಣ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ. ರಸ್ತೆ ಕೇಳಿದರೆ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸ್ಥಳಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

‘ಈ ಹಿಂದೆ ಐಗೂರು ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪರಿಶೀಲಿಸಲು ಕೆಲ ಸ್ಥಳೀಯರು ಪಂಚಾಯ್ತಿ ಕಚೇರಿಗೆ ತೆರಳಿದ್ದರು. ಹಗರಣ ಬಯಲಿಗೆ ಬರಲಿದೆ ಎಂದು ತಿಳಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಪೊಲೀಸರೊಂದಿಗೆ ಸೇರಿ ಸುಮಾರು ಎಂಟು ಮಂದಿಯನ್ನು ದೌರ್ಜನ್ಯ ಕಾಯ್ದೆಯಲ್ಲಿ ಬಂಧಿಸಿದ್ದರು. ಹೀಗೆ ಗ್ರಾಮದ ನಿವಾಸಿಗಳ ಮೇಲೆ ಶಾಸಕರು, ಅಧಿಕಾರಿಗಳು ಒಟ್ಟಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.