ಹಾನಗಲ್: ಮದ್ಯ ಸೇವಿಸಿ ಶಾಲೆಗೆ ಬರುವ ಶಿಕ್ಷಕರು, ನೆಮ್ಮದಿ ಕೇಂದ್ರ ಹಾಗೂ ಬೀಜ ವಿತರಣಾ ಕೇಂದ್ರಗಳ ಉದ್ಘಾಟನೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ, ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ದೋಷ. ಇವು ಗುರುವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಸಿ ಚರ್ಚೆಗೆ ಗ್ರಾಸವಾದ ಪ್ರಮುಖ ಅಂಶಗಳು.

ತಾಲ್ಲೂಕಿನ ಲಕ್ಮಾಪುರ ಮತ್ತು ಆಡೂರು, ಶ್ಯಾಡಗುಪ್ಪಿ ಗ್ರಾಮದ ಪ್ರೌಢಶಾಲೆಗಳು ಸೇರಿದಂತೆ ಹಲವಾರು ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಕುಡಿದು ಬರುತ್ತಾರೆ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಾರೆ. ಇಂಥ ಶಿಕ್ಷರನ್ನು ಅದ್ದುಬಸ್ತಿನಲ್ಲಿಡದ ಕ್ಷೇತ್ರ ಶಿಕ್ಷಾಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿವರಣೆ ನೀಡುತ್ತಾರೆ ಎಂದು ತಾ.ಪಂ. ಪ್ರತಿಪಕ್ಷ ನಾಯಕ ಮಧು ಪಾಣಿಗಟ್ಟಿ ಆಪಾದಿಸಿದರು.

ಶಾಲೆಗಳಲ್ಲಿ `ಶಿಕ್ಷಕರು ಮತ್ತು ಸೌಲಭ್ಯ ಕೊರತೆ ಇದೆ. ಇರುವ ಶಿಕ್ಷಕರಲ್ಲೇ ಹಲವರು ದುಶ್ಚಟಕ್ಕೆ ಒಳಗಾಗಿದ್ದು, ಇವೆಲ್ಲ ಅವ್ಯವಸ್ಥೆಗಳಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ ಪಾಣಿಗಟ್ಟಿ, ಇದರಿಂದ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದ ಅವರು, ಶಿಕ್ಷಣ ಇಲಾಖೆಯ ಗೌರವಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಅವರಿಗೆ ಸಲಹೆ ನೀಡಿದರು.

ತಾಲ್ಲೂಕಿನ ನಾಲ್ಕು ಭಾಗಗಳಲ್ಲಿ ಈಚೆಗೆ ಚಾಲನೆಗೊಂಡ ನೂತನ ನೆಮ್ಮದಿ ಕೇಂದ್ರಗಳ ಉದ್ಘಾಟನೆಗೆ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ. ಜನಪ್ರತಿನಿಧಿಗಳು, ಮಾಧ್ಯಮದವರಿಗೆ ವಿಷಯ ತಿಳಿಸದೇ ಇರುವುದರ ಹಿಂದಿನ ಉದ್ದೇಶವೇನು ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಪಕ್ಷಭೇದ ಮರೆತು ಸದಸ್ಯರು ಕಂದಾಯ ಇಲಾಖೆ ಅಧಿಕಾರಿಯ ಮೇಲೆ ಹರಿಹಾಯ್ದರು. ತಹಶೀಲ್ದಾರ್ ಸಭೆಗೆ ಆಗಮಿಸಿ ಈ ಬಗ್ಗೆ ಉತ್ತರಿಸಬೇಕು ಎಂದು ತಾ.ಪಂ. ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಪಟ್ಟು ಹಿಡಿದರು.

ಕೃಷಿ ಅಧಿಕಾರಿಯ ಇದೇ ತೆರನಾದ ಆರೋಪ ಮಾಡಿದ ತಾ.ಪಂ ಅಧ್ಯಕ್ಷರು, ಬೀಜ ವಿತರಣಾ ಕೇಂದ್ರಗಳ ಚಾಲನೆ ಕಾರ್ಯಕ್ರಮದ ವಿಷಯ ತಿಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ `ಶಿಷ್ಟಾಚಾರ ಪಾಲಿಸದೇ ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸಿದರೆ ಸಭೆಯಿಂದಲೇ ಹೊರಗೆ ಕಳಿಸುತ್ತೇನೆ' ಎಂದು ಅಧಿಕಾರಿ ಅಮೃತೇಶ್ವರ ಅವರಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಆಡೂರ-ಬೆಳಗಾಲಪೇಟೆ, ವರ್ದಿಕ್ರಾಸ್-ವರ್ದಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿದೆ. ಈ ಕಾಮಗಾರಿಯಲ್ಲಿ ಗುಣಮಟ್ಟದ ಸಂಶಯವಿದೆ ಎಂಬ ಜಿ.ಪಂ. ಸದಸ್ಯ ಮಹದೇವಪ್ಪ ಬಾಗಸರ ಹಾಗೂ ಮಧು ಪಾಣಿಗಟ್ಟಿ ಅವರ ಆರೋಪಕ್ಕೆ ಪಿಡಬ್ಲುಡಿ ಎಂಜನಿಯರ್ ಬಿ.ವೈ.ಬಂಡಿವಡ್ಡರ ಪ್ರತಿಕ್ರಿಯಿಸಿ, ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಬಿರುಕು ಸಹಜ. ಈಗ ಏರ್ಪಟ್ಟಿರುವ ಕ್ರ್ಯಾಕ್ಗಳನ್ನು ಸರಿಪಡಿಸಲಾಗುವುದು ಎಂದರು.

ಪಟ್ಟಣದ ಕುಡಿಯುವ ನೀರಿನ ಬೃಹತ್ ಆನಿಕೆರೆಯಲ್ಲಿ ನಡೆದಿರುವ ಕಾಮಗಾರಿಗಳ ವಿವರಣೆ ನೀಡಿದ ಚಿಕ್ಕ ನೀರಾವರಿ ಎಂಜಿನಿಯರ್ ಛಪ್ಪರ, ಪಟ್ಟಣದ ಚರಂಡಿಯ ಹೊಲಸು ನೀರು ಆನಿಕೆರೆ ಸೇರುವ ಮಾರ್ಗವನ್ನು ಬದಲಿಸಿ ಅಚಗೇರಿ ಕೆರೆಗೆ ಸೇರಿಸುವ ಮಾರ್ಗದ ಕಾರ್ಯನ ನಡೆಯುತ್ತಿದೆ ಎಂದರು.

ಇಲಾಖೆಯಿಂದ ನೀರಾವರಿ ಸೌಲಭ್ಯಕ್ಕಾಗಿ ರೈತರಿಗೆ ನೀಡುವ ಬೊರವೆಲ್ ಯೋಜನೆಯಲ್ಲಿ ಗೋಲ್ಮಾಲ್ ಆಗಿದ್ದೆ ಎಂದು ಬಾಗಸರ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಛಪ್ಪರ, ದಾಖಲೆಗಳನ್ನು ಪರಿಶೀಲಿಸಿ ಉತ್ತರಿಸುವುದಾಗಿ ತಿಳಿಸಿದರು.

ನೂತನ ಪಡಿತರ ಚೀಟಿ ಪಡೆಯುವಾಗ ಆದಾಯ ಪ್ರಮಾಣಪತ್ರ ಕಡ್ಡಾಯ ಎಂಬ ನಿಯಮವನ್ನು ಕೈಬಿಡಬೇಕು. ಇದರಿಂದ ಬಡ ಫಲಾನುಭವಿಗಳು ಅನುಭವಿಸುವ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ ಎಂದು ತಾ.ಪಂ. ಉಪಾಧ್ಯಕ್ಷೆ ಅನಿತಾ ಶಿವೂರ ಆಹಾರ ಅಧಿಕಾರಿ ಅರುಣ ಕಾರಗಿ ಅವರ ಗಮನಕ್ಕೆ ತಂದರು.

ತಾಲ್ಲೂಕಿನಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಸಭೆ ಮತ್ತು ಆಶಾ ಕಾರ್ಯಕರ್ತೆಯರಿಂದ ಲಾರ್ವಾ ಸರ್ವೆ ನಡೆಸುವ ಮೂಲಕ ಡೆಂಗೆ ಹತೋಟಿ ಮತ್ತು ಜಾಗೃತಿ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರಾಜೇಂದ್ರ ಗೊಡ್ಡೆಮ್ಮಿ ಸಭೆಗೆ ತಿಳಿಸಿದರು. ಗ್ರಾಮಗಳ ಚರಂಡಿಗಳನ್ನು ಸ್ವಚ್ಛಗೊಳಿಸಿ ಔಷಧಿ ಸಿಂಪಡನೆಯ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ತಾ.ಪಂ. ಅಧಿಕಾರಿಗೆ ಸೂಚಿಸಿದರು.

ತಾ.ಪಂ. ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಅನಿತಾ ಶಿವೂರ, ಜಿ.ಪಂ. ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಮಹದೇವಪ್ಪ ಬಾಗಸರ, ಅಭಿಪಾಬಿ ನದಾಫ್, ಕಸ್ತುರೆವ್ವ ವಡ್ಡರ ಮತ್ತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.