ಅಧ್ಯಾಪಕರಿಗೆ ಎಐಸಿಟಿಇ ಪರಿಷ್ಕೃತ ವೇತನ ಶ್ರೇಣಿ

7

ಅಧ್ಯಾಪಕರಿಗೆ ಎಐಸಿಟಿಇ ಪರಿಷ್ಕೃತ ವೇತನ ಶ್ರೇಣಿ

Published:
Updated:

ಬೆಂಗಳೂರು:  ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಬೋಧಕರಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನ (ಎಐಸಿಟಿಇ) ಪರಿಷ್ಕೃತ 6ನೇ ವೇತನ ಶ್ರೇಣಿ ಜಾರಿಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ರಾಜ್ಯದ 19 ಕಾಲೇಜುಗಳ ಸಿಬ್ಬಂದಿಗೆ ಇದರಿಂದ ಅನುಕೂಲವಾಗಲಿದೆ. ಸರ್ಕಾರಕ್ಕೆ ವಾರ್ಷಿಕ 79.32 ಕೋಟಿ ರೂಪಾಯಿ ಅಧಿಕ ಹೊರೆಯಾಗಲಿದೆ. 2006ರ ಜನವರಿ ಒಂದರಿಂದ 2010ರ ಮಾರ್ಚ್ 31ರವರೆಗೆ ನೀಡಬೇಕಾದ ಬಾಕಿ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. 2010ರ ಏಪ್ರಿಲ್ ಒಂದರ ನಂತರ ಹೊಸ ವೇತನ ಶ್ರೇಣಿ ಜಾರಿಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಚಿವ ವಿ.ಎಸ್. ಆಚಾರ್ಯ ತಿಳಿಸಿದರು.

ಸಹಾಯಕ ಪ್ರಾಧ್ಯಾಪಕರಿಗೆ 15,600ರಿಂದ 39,000 ರೂಪಾಯಿ, ಸಹ ಪ್ರಾಧ್ಯಾಪಕರು, ಪ್ರಿನ್ಸಿಪಾಲರಿಗೆ ರೂ 37,400ರಿಂದ 67000 ರೂಪಾಯಿ ಮೂಲ ವೇತನ ದೊರೆಯಲಿದೆ. ಸರ್ಕಾರಿ, ಅನುದಾನಿತ ಮತ್ತು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕಾಲೇಜುಗಳ ಬೋಧಕರಿಗೆ ಈ ಸೌಲಭ್ಯ ದೊರೆಯಲಿದೆ. 1986ರ ಜೂನ್ ಒಂದರಿಂದ 1996ರ ಅವಧಿಯಲ್ಲಿ ಆರಂಭವಾಗಿರುವ ಏಳು ಬಿಇಡಿ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲು ಸಂಪುಟ ಒಪ್ಪಿಗೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry