1. ಸುದೀರ್ಘ ಸೇವೆಯ ನಂತರ ಇತ್ತೀಚೆಗೆ ನಿವೃತ್ತಿಗೊಂಡ ಅದ್ಭುತ ವ್ಯೋಮವಾಹನ `ಸ್ಪೇಸ್ ಶಟಲ್~ ಚಿತ್ರ-1 ರಲ್ಲಿದೆ. ಈ ವಾಹನದ ಪರಮ ವಿಶಿಷ್ಟ ಗುಣ ಇವುಗಳಲ್ಲಿ ಯಾವುದಾಗಿತ್ತು ಗೊತ್ತೇ?
ಅ. ಅತ್ಯಧಿಕ ವೇಗ ಬ. ಅತಿ ಕಡಿಮೆ ವೆಚ್ಚ
ಕ. ಅತ್ಯಧಿಕ ಸುರಕ್ಷೆ
ಡ. ಮತ್ತೆ ಮತ್ತೆ ಬಳಸಬಹುದಾಗಿದ್ದ ಸಾಮರ್ಥ್ಯ.

2. ಸುಂದರ ಸೂರ್ಯೋದಯದ ದೃಶ್ಯವೊಂದು ಚಿತ್ರ-2 ರಲ್ಲಿದೆ. ಈ ಕೆಳಗಿನ ಯಾವ ಭೂ-ವಿದ್ಯಮಾನದಲ್ಲಿ ಸೂರ್ಯನ ಪಾತ್ರ ಇಲ್ಲ?
ಅ. ಸಸ್ಯ ದ್ಯುತಿ ಸಂಶ್ಲೇಷಣೆ ಬ. ಜಲ ಚಕ್ರ
ಕ. ಮಾರುತ ಚಕ್ರ ಡ. ಭೂ ಸ್ವಭ್ರಮಣ

3. `ಸೂರ್ಯ-ಭೂಮಿ-ಚಂದ್ರ~-ನಿಕಟ ಸಂಪರ್ಕದ ಈ ಮೂರೂ ಕಾಯಗಳು ಚಿತ್ರ-3 ರಲ್ಲಿವೆ. ಈ ಮೂರೂ ಕಾಯಗಳ ಸಹಯೋಗದಿಂದ-
ಅ. ಭೂ ಕಡಲಿನಾವಾರದಲ್ಲಿ ಮೈದೋರುವ ವಿದ್ಯಮಾನ ಯಾವುದು?
ಬ. ಆಕಾಶದಲ್ಲಿ ಗೋಚರಿಸುವ ವಿದ್ಯಮಾನ ಯಾವುದು?

4. ಚಂದ್ರನ ಮೇಲೆ ಭವಿಷ್ಯದ ಮಾನವ ವಸಾಹತುವೊಂದರ ಕಲ್ಪನಾ ಚಿತ್ರ ಇಲ್ಲಿದೆ (ಚಿತ್ರ-4). ಸೌರವ್ಯೆಹದ ಇನ್ನಾವ ಕಾಯ ಮನುಷ್ಯರ ಇಂಥ ನೆಲೆ ನಿರ್ಮಾಣಕ್ಕೆ ಯೋಗ್ಯ?
ಅ. ಗುರುಗ್ರಹ ಬ. ಮಂಗಳ ಗ್ರಹ
ಕ. ಶನಿಯ ಚಂದ್ರ ಟೈಟಾನ್
ಡ. ಗುರುವಿನ ಚಂದ್ರ ಯೂರೋಪಾ
ಢ. ಶುಕ್ರ ಗ್ರಹ.

5. ಭೂಮಿಗೆ ಬೀಳುತ್ತಿರುವ ಮತ್ತು ಭೂಮಿಯಿಂದ ಗೋಚರಿಸುತ್ತಿರುವ ದ್ವಿವಿಧ ವಿಭಿನ್ನ ವ್ಯೋಮಕಾಯಗಳು ಕ್ರಮವಾಗಿ ಚಿತ್ರ-5 ಮತ್ತು ಚಿತ್ರ-6 ರಲ್ಲಿವೆ. ಈ ಕಾಯಗಳನ್ನು ಗುರುತಿಸಬಲ್ಲಿರಾ?

6. ಮಂಗಳನ ಮೇಲಿಳಿದು ಅಲ್ಲಿನ ನೆಲದ ಅನ್ವೇಷಣೆ ನಡೆಸಿದ ಸ್ವಯಂಚಾಲಿತ, ಭೂನಿಯಂತ್ರಿತ ವೈಜ್ಞಾನಿಕ ವಾಹನವೊಂದು (ರೋವರ್) ಚಿತ್ರ-7 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಈಗಾಗಲೇ ಮಂಗಳನ ಮೇಲೆ ಓಡಾಡಿರುವ ರೋವರ್ಗಳು ಯಾವುವು? ಯಾವುದು ರೋವರ್ ಅಲ್ಲ?
ಅ. ಸ್ಪಿರಿಟ್ ಬ. ಪಾತ್ ಫೈಂಡರ್
ಕ. ಕ್ಯೂರಿಯಾಸಿಟಿ ಡ. ಆಪರ್ಚುನಿಟಿ

7. ನಮ್ಮ ಸೌರವ್ಯೆಹದ ಸದಸ್ಯರೇ ಆಗಿರುವ ಮತ್ತು ಹೇರಳ ಸಂಖ್ಯೆಯಲ್ಲಿರುವ `ಕ್ಷುದ್ರಗ್ರಹ~ಗಳಲ್ಲಿ ಕೆಲ ದೈತ್ಯರನ್ನು ನಮ್ಮ ಚಂದ್ರನ ಗಾತ್ರಕ್ಕೆ ಹೋಲಿಸಿದಂತೆ ಚಿತ್ರ-8 ರಲ್ಲಿ ತೋರಿಸಿದೆ. ಕ್ಷುದ್ರಗ್ರಹಗಳನ್ನು ಕುರಿತ ಎರಡು ಪ್ರಶ್ನೆಗಳು:
ಅ. ಅತ್ಯಂತ ದೈತ್ಯ ಕ್ಷುದ್ರಗ್ರಹದ ಹೆಸರೇನು?
ಬ. ಎಲ್ಲ ಕ್ಷುದ್ರಗ್ರಹಗಳ ಪ್ರಧಾನ ನೆಲೆಯಾದ `ಕ್ಷುದ್ರಗ್ರಹ ಪಟ್ಟಿ~ ಯಾವ ಎರಡು ಗ್ರಹಗಳ ನಡುವೆ ಹರಡಿದೆ?

8. ಭೂಮಿಯಿಂದ ನೋಡಿದರೆ ಒಂದೇ ನಕ್ಷತ್ರದಂತೆ ಕಾಣುವ, ಆದರೆ ವಾಸ್ತವವಾಗಿ ಹತ್ತಾರು ಸಾವಿರ ನಕ್ಷತ್ರಗಳ ಒಕ್ಕೂಟವಾದ ಕಾಯಗಳಲ್ಲೊಂದು ಚಿತ್ರ-9 ರಲ್ಲಿದೆ. ಈ ವಿಧದ ವಿಶಿಷ್ಟ ಕಾಯದ ಹೆಸರೇನು?
ಅ. ನಕ್ಷತ್ರ ಮಂಡಲ ಬ. ನಕ್ಷತ್ರ ಗುಚ್ಛ
ಕ. ನಕ್ಷತ್ರ ರಾಶಿ ಡ. ನಕ್ಷತ್ರ ವ್ಯೆಹ

9. ಭೂಮಿಯನ್ನು ಪರಿಭ್ರಮಿಸುತ್ತಿರುವ `ಕೃತಕ ಉಪಗ್ರಹ~ವೊಂದು ಚಿತ್ರ-10 ರಲ್ಲಿದೆ. ಈ ಕೆಳಗಿನ ಕಾರ್ಯಗಳಲ್ಲಿ ಯಾವುದು ಕೃತಕ ಉಪಗ್ರಹಗಳಿಗೆ ಸಂಬಂಧಿಸಿಲ್ಲ?
ಅ. ಹವಾ ಅಧ್ಯಯನ
ಬ. ಮಿಲಿಟರಿ ಗೂಢಚರ್ಯೆ
ಕ. ಭೂಕಂಪ ಮುನ್ಸೂಚನೆ
ಡ. ಟೆಲಿಸಂಪರ್ಕ ಇ. ದೂರ ಸಂವೇದನೆ
ಈ.. ಸಾಗರ ಸಂಶೋಧನೆ ಉ. ವ್ಯೋಮ ಅಧ್ಯಯನ

10. ವಿಶ್ವದಲ್ಲಿ ಹರಡಿರುವ ವ್ಯೋಮ ಕಾಯಗಳದು ನಾನಾ ವಿಧ-ಹೌದಲ್ಲ? ವಿಶಿಷ್ಟ ವಿಧದ ಅಂಥದೊಂದು ಕಾಯ ಚಿತ್ರ-11 ರಲ್ಲಿದೆ. `ಬೆಳಕಿನ ಮೋಡ~ದಂತಿರುವ ಈ ಕಾಯ ಯಾವುದು?
ಅ. ಗ್ಯಾಲಕ್ಸಿ ಬ. ನೀಹಾರಿಕೆ
ಕ. ನಕ್ಷತ್ರ ಪುಂಜ ಡ. ದೈತ್ಯ ನಕ್ಷತ್ರ

11. ತಾರಾ ಲೋಕದತ್ತ ಪಯಣ ಕೈಗೊಂಡಿರುವ ವಾಹನವೊಂದರ ಕಲ್ಪನಾ ದೃಶ್ಯ ಚಿತ್ರ-12 ರಲ್ಲಿದೆ. ವಾಸ್ತವದ ನಕ್ಷತ್ರಯಾನ ಸಧ್ಯದಲ್ಲಂತೂ ಅಸಾಧ್ಯ. ನಕ್ಷತ್ರಯಾನಕ್ಕೆ ತೊಡಕಾಗಿರುವ ಅತ್ಯಂತ ಪ್ರಥಮ ಮತ್ತು ಪ್ರಧಾನ ಕಾರಣ ಯಾವುದು?
ಅ. ನಕ್ಷತ್ರಗಳ ತಾಪ
ಬ. ತಾರೆಗಳ ಅಪಾಯಕಾರೀ ವಿಕಿರಣ
ಕ. ತಾರೆಗಳಿಗಿರುವ ವಿಪರೀತ ದೂರ
ಡ. ತಾರಾ ಯಾನದ ಬೃಹತ್ ವೆಚ್ಚ.

12. ಹೊಂದಿಸಿ ಕೊಡಿ:
1. ಮಹಾವ್ಯಾಧ ಅ. ನಕ್ಷತ್ರ
2. ರೀಗಲ್ ಬ. ಗ್ಯಾಲಕ್ಸಿ
3. ಗ್ಯಾನಿಮೀಡ್ ಕ. ನಕ್ಷತ್ರ ಪುಂಜ
4. ಆ್ಯಂಡ್ರೋಮೇಡಾ ಡ. ಧೂಮಕೇತು
5. ಊರ್ಟ್ ಮೋಡ ಇ. ಉಪಗ್ರಹ
6. ಟೆಂಪಲ್ ಟಟ್ಲ್ ಈ. ಧೂಮಕೇತು ತವರು

ಉತ್ತರಗಳು
1. ಡ-ಮರುಬಳಕೆಯ ಸಾಮರ್ಥ್ಯ

2. ಡ-ಭೂ ಸ್ವಭ್ರಮಣ

3. ಅ-ಉಬ್ಬರ-ಇಳಿತ; ಬ-ಗ್ರಹಣಗಳು

4. ಬ-ಮಂಗಳ ಗ್ರಹ

5. ಚಿತ್ರ-5-ಉಲ್ಕೆ; ಚಿತ್ರ-6-ಧೂಮಕೇತು

6. ಅ ಮತ್ತು ಡ; `ಬ~ ರೋವರ್ ಅಲ್ಲ

7. ಅ-ಸಿರೀಸ್; ಬ-ಮಂಗಳ ಮತ್ತು ಗುರುಗ್ರಹಗಳ ನಡುವೆ

8. ಬ-ನಕ್ಷತ್ರ ಗುಚ್ಛ

9. ಕ-ಭೂಕಂಪ ಮುನ್ಸೂಚನೆ

10. ಬ-ನೀಹಾರಿಕೆ

11. ಕ-ವಿಪರೀತ ದೂರ

12. 1-ಕ; 2-ಅ; 3-ಇ; 4-ಬ; 5-ಈ; 6-ಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.