ಚಿಂತಾಮಣಿ: ನಗರಸಭೆಯ ಮತ್ತು ತಹಶೀಲ್ದಾರ್ ಕಚೇರಿಯ ಅಧಿಕಾರಿ ಸಿಬ್ಬಂದಿ ವರ್ಗವು ಪೊಲೀಸರ ನೆರವಿನೊಂದಿಗೆ ಬುಧವಾರ ನಗರದ ಬಂಬು ಬಜಾರ್, ಕೀರ್ತಿನಗರ ಪ್ರದೇಶಗಳಲ್ಲಿ ಅನಧಿಕೃತ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದರು.ತಹಶೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಮೊದಲಿಗೆ ಸರ್ವೆ ನಂ 10ರಲ್ಲಿ ನಿರ್ಮಿಸಿಕೊಂಡಿದ್ದ ಅನೇಕ ಗುಜರಿ ಅಂಗಡಿಗಳ ಶೆಡ್ಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಿದರು.

ಬಹುತೇಕರು ಯಾವುದೆ ಪ್ರತಿರೋಧ ಒಡ್ಡದೆ ತೆರವಿಗೆ ಸಹಾಯ ಮಾಡಿದರು. ನಂತರ ಅಲ್ಲಿಂದ ಸರ್ವೆ ನಂ. 196 ರಲ್ಲಿ ಅನಧಿಕೃತ ಕಟ್ಟಡ ತೆರವುಗೊಳಿಸಲು ಹೋದಾಗ ಅಲ್ಲಿ ವಾಸದ ಮನೆಗಳಿದ್ದು, ತಾವು ಕಡುಬಡವರಾಗಿದ್ದು ತಮಗೆ ಸಮಯ ನೀಡಬೇಕೆಂದು ತಹಶೀಲ್ದಾರ್ಗೆ ಮನವಿಯನ್ನು ಮಾಡಿದರು. ತಹಶೀಲ್ದಾರ್ ಕೃಷ್ಣಮೂರ್ತಿಯವರು ಸಹ ಸರ್ಕಾರದ ನೀತಿ ನಿಯಮ ವಿವರಿಸಿ, ರಾಜ್ಯಾದ್ಯಂತ ಇಂತಹ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಮನೆಗಳ ಆವರಣದಲ್ಲೇ ತಹಶೀಲ್ದಾರ್ ಮತ್ತು ಮನೆಗಳ ಮಾಲೀಕರು ಹಾಗೂ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಅಲ್ಲಿ ಐದು ಅನಧಿಕೃತ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ದಾಖಲೆಗಳಿಲ್ಲದೆ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವುದು ಸಮಂಜಸವಲ್ಲ, ತಮ್ಮ ಇತಿಮಿತಿಗಳಲ್ಲಿ ತಾವು ಕೆಲಸ ಮಾಡಬೇಕಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದರು. ಅಂತಿಮವಾಗಿ ಕೆಲವು ಷರತ್ತುಗಳನ್ನು ವಿಧಿಸಿ 4-5 ದಿನಗಳ ಕಾಲಾವಕಾಶವನ್ನು ನೀಡಿದರು.

ಐಡಿಎಂಎಸ್ಎಂಟಿ ಸಂಕೀರ್ಣದ ಬಳಿ ಇರುವ ಸಹನೇಶ್ವರ ದೇವಾಲಯದ ಮುಜರಾಯಿ ಇಲಾಖೆಗೆ ಸೇರಿದ 21 ಅಂಗಡಿಗಳಿಗೆ ತಹಶೀಲ್ದಾರ್ ಬೀಗಮುದ್ರೆ ಹಾಕಿಸಿದರು. ವಾಸದ ಮನೆಗಳಿಗೆ ಕಾಲಾವಕಾಶ ನೀಡಲಾಗಿದೆ. ಹೆಚ್ಚಿನ ಪ್ರತಿರೋಧವಿಲ್ಲದೆ ಕಾರ್ಯಾಚರಣೆ ಶಾಂತವಾಗಿ ನಡೆಯಿತು. ನಂತರ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದರು.

ಧರಣಿ: ತಹಶೀಲ್ದಾರ್ ಸಂಜೆಯವರೆಗೂ ಅನಧಿಕೃತ ಕಟ್ಟಡ ತೆರವುಗೊಳಿಸುವುದು ಹಾಗೂ ಅಂಗಡಿಗಳಿಗೆ ಬೀಗಮುದ್ರೆ ಹಾಕುವ ಕಾರ್ಯಾಚರಣೆ ನಡೆಸುತ್ತಿದ್ದುದರಿಂದ ಕಚೇರಿ ಕಡೆಗೆ ಬರಲಿಲ್ಲ, ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ನಂತರ ಕೆಲವರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.