ಮಂಗಳವಾರ, ಮೇ 11, 2021
26 °C

ಅನಧಿಕೃತ ಹುಕ್ಕಾ :ಮಾರಾಟ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಹುಕ್ಕಾ ಕೊಳವೆಗಳನ್ನು ಹಾಗೂ ತಂಬಾಕು ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.ರಾಜಸ್ಥಾನ ಮೂಲದ ನರೇಶ್ ಸಿಂಗ್(22) ಹಾಗೂ ಧೀರು ಸಿಂಗ್(20) ಬಂಧಿತರು. ಇಬ್ಬರು ಸಹೋದರರಾಗಿದ್ದು ಕುಮಾರಸ್ವಾಮಿ ಲೇಔಟ್‌ನ 50 ಅಡಿ ರಸ್ತೆಯಲ್ಲಿ ತಂಪು ಪಾನಿಯದ ಅಂಗಡಿ ಇಟ್ಟುಕೊಂಡಿದ್ದರು.ಅಲ್ಲಿಯೇ ಸಣ್ಣ ಕೋಣೆಯೊಂದರಲ್ಲಿ ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡುತ್ತಿದ್ದಾರೆ ಎಂದು ಎನ್‌ಎಸ್‌ಯುಐ ಸಂಘಟನೆಯ ಸದಸ್ಯ ಮಹೇಶ್ ದೂರು ನೀಡಿದ್ದರು.ದೂರಿನನ್ವಯ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.