ಕೋಲಾರ: ಆಶ್ರಯ ಯೋಜನೆಯಲ್ಲಿ ಕೆಲ ಗ್ರಾಮಗಳಲ್ಲಿ ಶೇ. 10 ರಷ್ಟು ಮನೆಗಳು ಅನರ್ಹರ ಪಾಲಾಗಿರುವ ಬಗ್ಗೆ ದೂರುಗಳಿವೆ. ಅದಕ್ಕೆ ತಮ್ಮ ಬಣದ ಕೆಲ ಮುಖಂಡರ ಅಚಾತುರ್ಯವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಹೇಳಿದರು.

ತಾಲ್ಲೂಕಿನ ಅರಹಳ್ಳಿ, ತೊರದೇವಂಡಹಳ್ಳಿ, ಮಾರ್ಜೇನಹಳ್ಳಿ, ಅರಾಭಿಕೊತ್ತನೂರು, ಹೊನ್ನೇನಹಳ್ಳಿ, ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶ್ರಯ ಯೋಜನೆ ಫಲಾನುಭವಿಗಳಿಗೆ ಗುರುವಾರ ಮನೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

ಪ್ರತಿ ಗ್ರಾ.ಪಂ.ಗೆ 200ಕ್ಕೂ ಹೆಚ್ಚು ಮನೆಗಳನ್ನು ವಿತರಿಸುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸ ಲಾಗುತ್ತಿದೆ. ಯೋಜನೆಯಲ್ಲಿ ಕೈಬಿಟ್ಟಿ ರುವ ಅರ್ಹ ಫಲಾನುಭವಿಗಳಿಗೆ ಆಶ್ರಯ ಸವಲತ್ತು ದೊರಕಿಸಲು ಮತ್ತೊಮ್ಮೆ ಪಟ್ಟಿ ತಯಾರಿಸಿ ಆಶ್ರಯ ಮನೆ ವಿತರಿಸಲಾಗುವುದು ಎಂದರು.

ಸಾರಾಯಿ ನಿಷೇಧ: ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಮದ್ಯದ ಹಾವಳಿ ಹೆಚ್ಚಾಗಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಇಂದಿನಿಂದ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಬೇಕು.

ಇಲ್ಲವಾದಲ್ಲಿ ಪೊಲೀಸರ ಮೂಲಕ ಅಂಗಡಿಗಳನ್ನು ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿ.ಪಂ. ಸದಸ್ಯೆ ಚೌಡೇಶ್ವರಿ, ಬೆಗ್ಲಿ ಸೂರ್ಯಪ್ರಕಾಶ್, ವಕ್ಕಲೇರಿ ರಾಮು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.