ಗುರುವಾರ , ಮೇ 13, 2021
40 °C

ಅನುದಾನ ಸದ್ಬಳಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಅನುದಾನವನ್ನು ಅಗತ್ಯ ಕಾಮಗಾರಿಗಳಿಗೆ ಮಾತ್ರ ಮೀಸಲಿಟ್ಟು ಸಮರ್ಪಕವಾಗಿ ಬಳಸಬೇಕೆಂದು ಜಿ.ಪಂ. ಅಧ್ಯಕ್ಷ ಆನಂದರವಿ ಅಧಿಕಾರಿಗಳಿಗೆ ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ವಾರ್ಷಿಕ ಯೋಜನೆ ವರದಿ ತಯಾರಿಕೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ತಾಲ್ಲೂಕಿನ ನಿರೀಕ್ಷಿತ ಕಾಮಗಾರಿಗಳ ಪಟ್ಟಿ ತಯಾರಿಕೆಗೆ ಸಲಹೆ ನೀಡಿದರು.ಮೀನುಗಾರಿಕೆ ಇಲಾಖೆ ವಿರುದ್ಧ ಹರಿಹಾಯ್ದ ಅವರು, ಇಲಾಖೆ ಅಧಿಕಾರಿಗಳು ಜವಾಬ್ದಾರಿ ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಟ್ರಾನ್ಸ್‌ಫಾರ‌್ಮರ್ ಹಾಕುತ್ತೇವೆಂದು ರೈತರಿಂದ ಹಣ ಕಟ್ಟಿಸಿಕೊಂಡು ತಿಂಗಳು ಕಳೆದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಬಿಸಿಯೂಟ ಮತ್ತು ಅಂಗನವಾಡಿ ಆಹಾರ ಕಳಪೆ ಕಂಡುಬಂದರೆ ಬದಲಾಯಿಸಿಕೊಳ್ಳಿ. ಕಳಪೆ ಸರಬರಾಜು ಮುಂದುವರಿದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.13ನೇ ಹಣಕಾಸು ಯೋಜನೆ ನಾಗರೀಕ ಸವಲತ್ತಿನಡಿ ಜಿ.ಪಂ. ಸದಸ್ಯರ ನಿಧಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ಸೋಲಾರ್ ದೀಪ ಅವವಡಿಸಲು ಹಾಗೂ ಶಾಲೆಗಳಿಗೆ ಬಯಲು ರಂಗಮಂದಿರ ನಿರ್ಮಿಸಲು ಬಳಸಬೇಕೆಂದು ನಿರ್ಧರಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಯಣ್ಣ, ಜಿ.ಪಂ. ಸದಸ್ಯರಾದ ತ್ರಿಯಂಬಕ, ಮಣಕೀಕೆರೆ ನಾಗರಾಜು, ಯಶೋಧಾ ಗಂಗರಾಜು, ಮುಖ್ಯಯೋಜನಾಧಿಕಾರಿ ರಾಜಮ್ಮ, ಇಒ ಷಡಕ್ಷರಮೂರ್ತಿ ಮತ್ತಿತರರು ಇದ್ದರು.ಸಭೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಆನಂದರವಿ, ತುಮಕೂರು ಜಿ.ಪಂ. ಪ್ರಗತಿ ವಿಷಯದಲ್ಲಿ ರಾಜ್ಯದಲ್ಲಿ 30ನೇ ಸ್ಥಾನದಲ್ಲಿದ್ದು, ಕಳವಳ ಹುಟ್ಟಿಸಿದೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.ಈ ನಿಟ್ಟಿನಲ್ಲಿ ತಾಲ್ಲೂಕುಗಳಿಗೆ ಹೋಗಿ ವಾರ್ಷಿಕ ಯೋಜನೆ ವರದಿ ತಯಾರಿಕೆ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ.  ಕುಡಿಯುವ ನೀರಿನ ಓವರ್ ಟ್ಯಾಂಕ್ ನಿರ್ಮಾಣಕ್ಕೆ 10ಕ್ಕೂ ಹೆಚ್ಚು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.