ನವದೆಹಲಿ (ಪಿಟಿಐ): ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ 47 ಹಿರಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಸಂಬಂಧಿಸಿದ ಇಲಾಖೆಗಳ ಅನುಮತಿಗಾಗಿ ಕೇಂದ್ರ ಜಾಗೃತ ಆಯೋಗವು (ಸಿವಿಸಿ) ನಾಲ್ಕು ತಿಂಗಳಿಗೂ ಹೆಚ್ಚು ಕಾಲದಿಂದ ಕಾಯುತ್ತಿದೆ.

ಒಟ್ಟು 29 ಅವ್ಯವಹಾರ ದೂರುಗಳ ಪೈಕಿ 11 ಪ್ರಕರಣಗಳು ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿವೆ.
ಸಚಿವಾಲಯಕ್ಕೆ ಸಂಬಂಧಿಸಿವೆ. ಉಳಿದಂತೆ, ಮೂರು ಪ್ರಕರಣಗಳು ರೈಲ್ವೆ ಇಲಾಖೆಗೆ, ತಲಾ ಎರಡು ಪ್ರಕರಣಗಳು ಎಸ್ಬಿಐ, ಮಾನವ ಸಂಪನ್ಮೂಲ ಇಲಾಖೆ ಹಾಗೂ ಬಿಎಸ್ಸೆನ್ನೆಲ್ಗೆ ಸಂಬಂಧಪಟ್ಟಿವೆ.ಇವುಗಳ ಜತೆಗೆ ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಇಲಾಖೆ, ದೇನಾ ಬ್ಯಾಂಕ್, ಕೆನರಾ ಬ್ಯಾಂಕ್, ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (ಐಡಿಬಿಐ), ಕಾರ್ಮಿಕ ಸಚಿವಾಲಯ, ಹಡಗು ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ, ರಕ್ಷಣಾ ಇಲಾಖೆ ಮತ್ತು ಉಕ್ಕು ಸಚಿವಾಲಯಗಳಿಗೆ ಸಂಬಂಧಿಸಿದ ತಲಾ ಒಂದು ಪ್ರಕರಣಗಳೂ ಪಟ್ಟಿಯಲ್ಲಿವೆ.

ಹಲವು ಪ್ರಕರಣಗಳಲ್ಲಿ, ನಿಗದಿಗಿಂತ ಹೆಚ್ಚು ಅವಧಿಯ ನಂತರವೂ ಅಧಿಕಾರಿಗಳ ತನಿಖೆಗೆ ಇನ್ನೂ ಅನುಮತಿ ಸಿಕ್ಕಿಲ್ಲ.

ಈ ವಿಳಂಬ ಧೋರಣೆಯು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಯತ್ನಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ಸಿವಿಸಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.