ಗುರುವಾರ , ಜುಲೈ 29, 2021
23 °C

ಅನೈತಿಕ ಸಂಬಂಧ: ಒಬ್ಬನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ:  ನಗರದಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಚಾಂದ್ ಪಾಷ (37) ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಜಿ ಮೊಹಲ್ಲಾ ಬಡಾವಣೆಯ ಜಾಕೀರ್ ಹುಸೇನ್ (42) ಎಂಬಾತನನ್ನು ಸಿಪಿಐ ಎಂ.ಮಲ್ಲೇಶ್ ಹಾಗೂ ಸಿಬ್ಬಂದಿ ಸಂಜೆ ಬಂಧಿಸಿದ್ದಾರೆ.

ಜಾಕೀರ್ ಹುಸೇನ್‌ನ ಪತ್ನಿ ಜೊತೆ ಚಾಂದ್‌ಪಾಷ ಅಕ್ರಮ ಸಂಬಂಧ ಹೊಂದಿದ್ದೇ  ಆತನ ಕೊಲೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮರಗೆಲಸ ವೃತ್ತಿ ಮಾಡುತ್ತಿದ್ದ, ಮದನಪಲ್ಲಿ ಮೂಲದ ಚಾಂದ್‌ಪಾಷನನ್ನು ಅಂಬೇಡ್ಕರ್ ಕಾಲೊನಿ ಬಳಿ ಚಹಾ ಕುಡಿಯಲು ಹೋಗುತ್ತಿದ್ದಾಗ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.