ಭಾನುವಾರ, ಏಪ್ರಿಲ್ 11, 2021
22 °C

ಅಪಘಾತದಿಂದ ಕುಟುಂಬ ದಿವಾಳಿಯ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಯುವಕರು ವಾಹನ ಚಾಲನ ಪ್ರಮಾಣ ಪತ್ರ ಪಡೆಯದೇ ಉತ್ಸಾಹದಲ್ಲಿ ವಾಹನ ಚಾಲನೆ ಮಾಡಿ ಅಪಘಾತ ಪಡಿಸಿದರೆ ಆರ್ಥಿಕವಾಗಿ, ಮಾನಸಿಕವಾಗಿ ಇಡೀ ಕುಟುಂಬ ದಿವಾಳಿಯಾಗುವ ಅಪಾಯವಿರುತ್ತದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೊಟ್ರಯ್ಯ ಹಿರೇಮಠ ಎಚ್ಚರಿಸಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಡಳಿತ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಸಾಕ್ಷರತಾ ರಥಯಾತ್ರೆ ಅಂಗವಾಗಿ ನಡೆದ ಮೂರು ದಿನಗಳ ಕಾನೂನು ಅರಿವು-ನೆರವು ಕಾರ್ಯಕ್ರಮ ಮುಕ್ತಾಯಗೊಳಿಸಲು ಸರಕಾರಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಾಲ ಕಾರ್ಮಿಕರನ್ನು ದುಡಿಮೆಗೆ ಹಚ್ಚಿ ಅವರ ಬಾಲ್ಯವನ್ನು ಕಸಿದುಕೊಳ್ಳದಂತೆ ಮತ್ತು ಬಾಲಕರ ಇಡೀ ಜೀವನ ನಿರುಪಯುಕ್ತ ಆಗದಂತೆ ನೋಡಿಕೊಳ್ಳುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದರು.ಜಿಲ್ಲಾ ನ್ಯಾಯಾಧೀಶ ಎಸ್.ವಿ. ಕುಲಕರ್ಣಿ ಮಾತನಾಡಿ, ತಮ್ಮ ಹಕ್ಕುಗಳಿಂದ ವಂಚಿತರಿಗೆ ಕಾನೂನಿನ ತಿಳಿವಳಿಕೆ ನೀಡುವುದು ಮತ್ತು ವಿದ್ಯಾರ್ಥಿಗಳಿಗೆ ಕನಿಷ್ಠ ಸಾಮಾನ್ಯ ಕಾನೂನಿನ ಅರಿವು ಮೂಡಿಸುವುದು ಕಾನೂನು ಸಾಕ್ಷರತಾ ರಥಯಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.ವಕೀಲ ಎಸ್.ಎಲ್. ನ್ಯಾಮಗೌಡ (ಬಾಲ ಕಾರ್ಮಿಕ ವಿರೋಧಿ ಕಾಯ್ದೆ) ಹಾಗೂ ವಕೀಲ ಆರ್.ಆರ್. ಕರೋಶಿ (ಮೋಟಾರು ವಾಹನ ಕಾಯ್ದೆ) ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿರಾದಾರ ದೇವೆಂದ್ರಪ್ಪ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸರಸ್ವತಿ ದೇವಿ, ಡಿವೈಎಸ್ಪಿ ಗಿರೀಶ ಕಾಂಬಳೆ, ವಕೀಲರ ಸಂಘದ ಅಧ್ಯಕ್ಷ ಸಿ.ಆರ್. ಸುತಾರ, ಉಪಾಧ್ಯಕ್ಷ ಎಂ.ಆರ್. ಸಯ್ಯದ್ ಉಪಸ್ಥಿತರಿದ್ದರು.ಎಪಿಪಿ ಎಚ್.ಜಿ.ಮುಲ್ಲಾ, ಹೆಚ್ಚುವರಿ ಎಪಿಪಿ ಚಿದಾನಂದ ಬಡಿಗೇರ ಹಾಜರಿದ್ದರು. ಸಿ.ಪಿ.ಪಟ್ಟಣಶೆಟ್ಟಿ ಸ್ವಾಗತಿಸಿದರು. ಐಟಿಐ ಕಾಲೇಜು ಪ್ರಾಚಾರ್ಯ ಸಿ.ವಿ.ಹಲಕುರ್ಕಿ ವಂದಿಸಿದರು. ವಕೀಲ ರವಿ ಯಡಹಳ್ಳಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.