ಸೋಮವಾರ, ಜನವರಿ 20, 2020
27 °C

ಅಪಘಾತ: ಕುಟುಂಬದ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಹಾಸನ–ಬೇಲೂರು ರಸ್ತೆಯ ಜೆ. ಸೂರಾಪುರ ಬಳಿ ಮಂಗಳ­ವಾರ ಸಂಜೆ ಸಂಭವಿಸಿದ ವೋಲ್ವೊ ಬಸ್‌ ಮತ್ತು ಕಾರಿನ ನಡುವೆ ಸಂಭವಿ­ಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳ­ದ­ಲ್ಲಿ­ಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಂಗಳೂರಿನ ಜೆಪಿ ನಗರದ ತ್ಯಾಗ­ರಾಜ್‌, ಕಲಾ, ವೇದಾ ಎಂಬುವವರು ಮೃತಪಟ್ಟವರು. ಕಿರಣ್‌, ಪೂಜಾ ಎಂಬ ಇಬ್ಬರು ಮಕ್ಕಳು ಮತ್ತು ರವಿ ಎಂಬುವವರಿಗೆ ತೀವ್ರ ಗಾಯಗಳಾ­ಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೋಲ್ವೊ ಬಸ್‌ನ­ಲ್ಲಿದ್ದ ಇಬ್ಬರು ಪ್ರವಾಸಿಗರಿಗೆ ಗಾಯಗಳಾಗಿವೆ. ಬೇಲೂರಿನಿಂದ ಮೈಸೂರಿಗೆ ತೆರಳು­ತ್ತಿದ್ದ ಖಾಸಗಿ ಬಸ್‌ ಮತ್ತು ಬೆಂಗಳೂ­ರಿ­ನಿಂದ ಬೇಲೂರು ಕಡೆಗೆ ಬರುತ್ತಿದ್ದ ಕಾರಿ­ನ ನಡುವೆ ಸೋಮವಾರ ಸಂಜೆ 7 ಗಂಟೆ­ಯ ಸಮಯದಲ್ಲಿ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತ­ದಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನೊಳಗೆ ಸಿಕ್ಕಿ­ಕೊಂಡ ಶವಗಳನ್ನು ಸ್ಥಳೀಯರು ಹಾರೆ ಹಾಗೂ ಮತ್ತಿತರ ಸಾಮಗ್ರಿಗಳಿಂದ ಮೀಟಿ ಹೊರತೆಗೆದರು. ಗಾಯಾಳು­ಗಳ­ನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದರು. ಇದರಿಂದಾಗಿ ಬೇಲೂರು­–­ಹಾಸನ ನಡುವಿನ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಸುದ್ದಿ ತಿಳಿದ ತಕ್ಷಣ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಎಲ್‌. ಗಣೇಶ್‌ ಮತ್ತು ಪಿಎಸ್‌ಐ ಅಶ್ವಿನ್‌­ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅಪಘಾತ ದೃಶ್ಯ ವೀಕ್ಷಿಸಿ ದಿಗ್ಭ್ರಮೆ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)