ಅಪಘಾತ: ನಾಲ್ವರ ಸಾವು

7

ಅಪಘಾತ: ನಾಲ್ವರ ಸಾವು

Published:
Updated:
ಅಪಘಾತ: ನಾಲ್ವರ ಸಾವು

ಸಂಕೇಶ್ವರ (ಬೆಳಗಾವಿ ಜಿಲ್ಲೆ): ಇಲ್ಲಿಗೆ ಸಮೀಪದ ಸೋಲಾಪುರ ಕ್ರಾಸ್ ಬಳಿ ಕ್ರೂಸರ್ ವಾಹನ ಮತ್ತು ಅಪರಿಚಿತ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ, ಕ್ರೂಸರ್‌ನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿ, ಒಬ್ಬರು ಗಾಯಗೊಂಡ ಘಟನೆ ಗುರುವಾರ ನಸುಕಿನಲ್ಲಿ ಸಂಭವಿಸಿದೆ.ದಾವಣಗೆರೆಯ ಚಾಲಕ ಮಹ್ಮದ್ ಇಸ್ಮಾಯಿಲ್ (31), ಹಾವೇರಿ ಜಿಲ್ಲೆಯ ದೇವಿಹೊಸೂರಿನ ಇಬ್ರಾಹಿಮ್‌ಸಾಬ್ ಸೀಗೆಹಳ್ಳಿ (60), ಧಾರವಾಡ ಜಿಲ್ಲೆಯ ಬ್ಯಾಹಟ್ಟಿಯ ಸಂತೋಷ ಗುಂಡಾರ ಮತ್ತು ನಿಪ್ಪಾಣಿ ಸಮೀಪದ ಗಾಯಕವಾಡಿಯ ವಾಸಪ್ಪಾ ಲಾಂಡಗೆ (50) ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಬಂಕಾಪುರದ ಅಬ್ದುಲ್ ರಜಾಕ್ ಹುಣಸಿಮರದ ಗಾಯಗೊಂಡ್ದ್ದಿದು, ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ಕ್ರೂಸರ್ ವಾಹನವು ಆಂಗ್ಲ ದಿನಪತ್ರಿಕೆಯೊಂದರ ಪ್ರತಿಗಳನ್ನು ಹುಬ್ಬಳ್ಳಿಯಿಂದ ಕೊಲ್ಹಾಪುರಕ್ಕೆ ಸಾಗಿಸುತ್ತಿದ್ದಾಗ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೋಲಾಪುರ ಕ್ರಾಸ್‌ನಲ್ಲಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕ್ರೂಸರ್ ವಾಹನವನ್ನು ಕ್ಲೀನರ್ ಚಾಲನೆ ಮಾಡುತ್ತ್ದ್ದಿದ, ಚಾಲಕ ಸುಬ್ಬರಾವ್ ಕುಲಕರ್ಣಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry