ಶುಕ್ರವಾರ, ಮೇ 14, 2021
30 °C

ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ:ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಪಕ್ಷಾತೀತವಾಗಿ ಎಲ್ಲರ ಸಲಹೆ-ಸಹಕಾರ ಪಡೆಯಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಸೋಮವಾರ ವಿನೋಬನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ,ಭಗತ್‌ಸಿಂಗ್ ವೃತ್ತದ ಸಿಗ್ನಲ್ ಲೈಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಬೇರೆ ಪಕ್ಷದವರ ಸಲಹೆಗಳನ್ನೂ ಪಡೆಯಲಾಗುವುದು.  ಕಳೆದ 60 ವರ್ಷಗಳಲ್ಲಿ ಕಾಣದ ನಗರದ ಅಭಿವೃದ್ಧಿ ಕೇವಲ ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಮಾಡಿದ್ದಾರೆ.

 

ಪ್ರಸ್ತುತ ಮುಖ್ಯಮಂತ್ರಿ  ಅವರೂ ನಗರದ ಅಭಿವೃದ್ಧಿಗೆ ಬೇಕಾದ ಅನುದಾನ ನೀಡಲು ಸಿದ್ಧರಿದ್ದಾರೆ. ಶಿವಮೊಗ್ಗ ಶೀಘ್ರದಲ್ಲೇ ನಗರಪಾಲಿಕೆಯಾಗಲಿದೆ. ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ರೂ.100ಕೋಟಿ ಅನುದಾನ ಸಿಗಲಿದೆ ಎಂದು ಹೇಳಿದರು.~ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ಪ್ರಸ್ತುತ ರೂ.1.70 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ~ವೀರ ಸಾರ್ವಕರ್ ವಾಣಿಜ್ಯ ಸಂಕೀರ್ಣ~ ಎಂದು ನಾಮಕರಣ ಮಾಡಲಾಗಿದೆ. ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಬೆಂಗಳೂರು ಮಾದರಿಯಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು.

 

ಗೋಪಿಶೆಟ್ಟಿ ಬಡಾವಣೆ ನಿರ್ಮಾಣ ಕಾರ್ಯ 15 ದಿವಸದಲ್ಲಿ ಮುಕ್ತಾಯಗೊಳ್ಳಲಿದೆ. ಮಲ್ಲಿಗೇನಹಳ್ಳಿಯಲ್ಲಿ ಎರಡನೇ ಹಂತದ ಕಾರ್ಯಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು. ನಗರದಲ್ಲಿ ಹೊಸದಾಗಿ ಮೂರು ಸಾವಿರ ನಿವೇಶನ ಹಂಚಿಕೆ ಮಾಡಲು ~ಸೂಡಾ~ ಉದ್ದೇಶಿಸಿದೆ ಎಂದರು.ಸಮಾರಂಭದಲ್ಲಿ  ಆಯನೂರು ಮಂಜುನಾಥ, ಕೆ.ಜಿ. ಕುಮಾರಸ್ವಾಮಿ, ಗಿರೀಶ್ ಪಟೇಲ್, ಶುಭಾ ಕೃಷ್ಣಮೂರ್ತಿ, ಎಸ್.ಎನ್. ಚನ್ನಬಸಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಎಂ.ವಿ. ವೇದಮೂರ್ತಿ, ಎಸ್. ಜ್ಞಾನೇಶ್ವರ್, ಸದಾಶಿವಪ್ಪ, ಬಿ.ಎನ್. ಗಿರೀಶ್, ಪಿ.ಜಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.