ಶನಿವಾರ, ಮೇ 15, 2021
24 °C

ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧೂಪದಾಳ (ಗೋಕಾಕ): ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಇಲ್ಲಿಯ ಗ್ರಾ.ಪಂ. ಅಧ್ಯಕ್ಷ ಸತ್ಯಪ್ರಕಾಶ ಮಲ್ಲಾಪೂರ ಸಲಹೆ ನೀಡಿದರು.

ಸೋಮವಾರ ಗ್ರಾಮದಲ್ಲಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಜನಪರ ಕೆಲಸಗಳು ಅನುಷ್ಠಾನಗೊಳ್ಳಲು ಜನರ ಸಹಕಾರವೂ ಅಗತ್ಯವಾಗಿದೆ ಎಂದರು.ಜಿ.ಪಂ. ಸದಸ್ಯೆ ವಂದನಾ ಕತ್ತಿ ಅವರು ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಿರಲಿ ಎಂದು ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಲಕ್ಷ್ಮಣ ಗಾಡಿವಡ್ಡರ, ಗ್ರಾ.ಪಂ. ಸದಸ್ಯರಾದ ನೇಮಿನಾಥ ಬೊಮ್ಮನ್ನವರ ಮತ್ತು ಚೂಡಾಮಣಿ ಬೆಳವಿ, ಗ್ರಾಮದ ಹಿರಿಯರಾದ ಭೀಮಶಿ ದೇಮನ್ನವರ, ದೇವೇಂದ್ರ ನಾಗನ್ನವರ, ಶ್ರೀಮಂತ ಬೆಳವಿ, ಶಿವಲಿಂಗ ಪಾಟೀಲ, ಸುಭಾಷ ರಜಪೂತ, ಆದಪ್ಪಾ ಮಗದುಮ್, ಹಣಮಂತ ಗಾಡಿವಡ್ಡರ, ಇಮಮಸಾಬ ಬಳಿಗಾರ, ಹಣಮಂತ ವಗ್ಗರ, ಮದಾರಸಾಬ್ ಜಗದಾಳ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.