ಲಂಡನ್ (ಪಿಟಿಐ): ವಿಶ್ವದಾದ್ಯಂತ ಅಪಾರಅಭಿಮಾನಿ ಬಳಗವನ್ನು ಹೊಂದಿರುವ ತಮಿಳಿನ ಖ್ಯಾತ ನಟ ರಜನಿಕಾಂತ್ ಪ್ರಸಿದ್ಧಿ ಎಲ್ಲೆಗಳನ್ನು ಮೀರಿ ಪಸರಿಸಿದ್ದರೂ ಅವರು ಮಾತ್ರ, ತಮಗೆ ಅಮಿತಾಭ್ ಬಚ್ಚನ್ ಏಕೈಕ ಸೂಪರ್ಸ್ಟಾರ್ ಎಂದು ಹೇಳಿದ್ದಾರೆ.

ತಮ್ಮ `ಕೊಚಾಡಿಯನ್~ ಚಿತ್ರದ ಪ್ರಚಾರಕ್ಕೆ ಲಂಡನ್ಗೆ ಆಗಮಿಸಿರುವ ರಜನಿಕಾಂತ್ ಅವರಿಗೆ `ತಾವು ಸೂಪರ್ಸ್ಟಾರ್ ಎಂದು ಎಲ್ಲರಿಂದ ಕರೆಸಿಕೊಳ್ಳುತ್ತಿರುವುದು ಹೇಗೆನ್ನಿಸುತ್ತದೆ~ ಎಂದು ಕೇಳಿದ ಪ್ರಶ್ನೆಗೆ ರಜನಿ, `ನನಗೆ ಅಮಿತಾಭ್ ಬಚ್ಚನ್ ಒಬ್ಬರೇ ಸೂಪರ್ಸ್ಟಾರ್~ ಎಂದು ಉತ್ತರಿಸಿದರು.

`ನಾನು ನಟಿಸುವ ಎಲ್ಲಾ ಚಿತ್ರಗಳು ನನಗೆ ಮೊದಲ ಚಿತ್ರವಿದ್ದಂತೆ. ನಾನು ನಿರ್ದೇಶಕ, ನಿರ್ಮಾಪಕರ ಆಯ್ಕೆಯನ್ನು ತುಂಬಾ ಆಲೋಚಿಸಿ ಮಾಡುತ್ತೇನೆ~ ಎಂದು 61 ವರ್ಷದ ರಜನಿಕಾಂತ್ ಹೇಳಿದರು.
ರಜನಿ ಪುತ್ರಿ ಐಶ್ವರ್ಯಾ ನಿರ್ದೇಶಿಸಿರುವ `ಕೊಚಾಡಿಯನ್~ ದೀಪಾವಳಿ ಸಂದರ್ಭದಲ್ಲಿ ನವೆಂಬರ್ 13ರಂದು ಈ ಚಿತ್ರ ತೆರೆ ಕಾಣಲಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.