ಸೋಮವಾರ, ಜನವರಿ 20, 2020
19 °C

ಅಮೆರಿಕದ ನೂತನ ರಾಯಭಾರಿಯಾಗಿ ಎಸ್.ಜೈಶಂಕರ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನದಿಂದ ಭಾರತ ಮತ್ತು ಅಮೆರಿಕದ ಮಧ್ಯೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಭಾರತವು ಎಸ್.ಜೈಶಂಕರ್ ಅವರನ್ನು ಅಮೆರಿಕದ ನೂತನ ರಾಯಭಾರಿಯನ್ನಾಗಿ ನೇಮಕ ಮಾಡಿದ್ದು, ಜೈಶಂಕರ್ ಅವರು ಮಂಗಳವಾರ ಇಲ್ಲಿಗೆ ಆಗಮಿಸಿ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಇತ್ತೀಚಿನವರೆಗೂ ಜೈಶಂಕರ್ ಅವರು ಚೀನಾದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಮ್ಮ ತಲೆಮಾರಿನ ರಾಜತಾಂತ್ರಿಕ ಅಧಿಕಾರಿ ವರ್ಗದಲ್ಲಿಯೇ ತೀಕ್ಷ್ಣಮತಿ ಅಧಿಕಾರಿಯಾಗಿರುವ ಜೈಶಂಕರ್ ಅವರು ಭಾರತ-ಅಮೆರಿಕ ನಾಗರೀಕ ಪರಮಾಣು ಒಪ್ಪಂದದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸದ್ಯ, ದೇವಯಾನಿ ಅವರ ಬಂಧನದಿಂದ ಉಭಯ ದೇಶಗಳ ಬಾಂಧವ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸುವುದು ಜೈಶಂಕರ್ ಅವರ ಮುಂದಿರುವ ಸವಾಲಾಗಿದೆ.

ಜೈಶಂಕರ್ ಅವರು ಮಂಗಳವಾರ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರೂ ಕೂಡ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ರಿಸ್‌ಮಸ್ ರಜೆಯಲ್ಲಿರುವುದರಿಂದ ಶ್ವೇತಭವನದಲ್ಲಿ ಒಬಾಮಾ ಅವರಿಂದ ಔಪಚಾರಿಕ ರಾಜತಾಂತ್ರಿಕ ಅಧಿಕಾರ ಪತ್ರ ಪಡೆಯಲು ಹಲವು ವಾರಗಳ ಕಾಲ ಕಾಯಬೇಕಾಗಿದೆ.

ಪ್ರತಿಕ್ರಿಯಿಸಿ (+)