ಅಮೆರಿಕ ಗುರುತಿಸಿದ್ದು ಒಳ್ಳೆ ಬೆಳವಣಿಗೆ: ಕೃಷ್ಣ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅಮೆರಿಕ ಗುರುತಿಸಿದ್ದು ಒಳ್ಳೆ ಬೆಳವಣಿಗೆ: ಕೃಷ್ಣ

Published:
Updated:

ನ್ಯೂಯಾರ್ಕ್ (ಪಿಟಿಐ): ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಹಖಾನಿ ಉಗ್ರ ಜಾಲ ನಡುವೆ ಪರಸ್ಪರ ಸಂಬಂಧ ಇರುವುದನ್ನು ಅಮೆರಿಕದ ಆಡಳಿತ ಪರಿಗಣಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.ಎಸ್‌ಎಸ್‌ಐಯು ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದೆ ಎಂದು ಅಮೆರಿಕ ಹೇಳಿದ ನಂತರ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ವಿವಾದದ ನಡುವೆಯೇ ಎಸ್.ಎಂ ಕೃಷ್ಣ ಈ ಹೇಳಿಕೆ ನೀಡಿದ್ದಾರೆ.`ಐಎಸ್‌ಐಗೆ ಉಗ್ರರೊಂದಿಗೆ ಸಂಬಂಧವಿದೆ ಎಂದು ನಾವು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ ಈಗ ಅಮೆರಿಕಕ್ಕೆ ಕೂಡ ಅದು ಮನವರಿಕೆ ಆಗಿರುವುದು ಸಂತಸ ತಂದಿದೆ~ ಎಂದು ಕೃಷ್ಣ ಹೇಳಿದ್ದಾರೆ.`ಈ ವಿಚಾರದಲ್ಲಿ ನಮ್ಮ ನಿಲುವು ಈಗ ಸಮರ್ಥನೆಗೊಂಡಿದೆ ಎಂದು ನನಗನ್ನಿಸುತ್ತದೆ~ ಎಂದು ಸಚಿವರು ಹೇಳಿದ್ದಾರೆ.ಪಾಕಿಸ್ತಾನ ಸೇನಾ ಗುಪ್ತಚರ ಸಂಸ್ಥೆ ಐಎಸ್‌ಐಯು ಹಖಾನಿ ಉಗ್ರ ಸಂಘಟನೆಗೆ ಬೆಂಬಲ ಮಾತ್ರ ನೀಡುತ್ತಿಲ್ಲ;  ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆ ಮೇಲೆ ದಾಳಿ ನಡೆಸಲೂ ಅದು ಕುಮ್ಮಕ್ಕು ನೀಡುತ್ತಿದೆ ಎಂದು ಅಮೆರಿಕ ಇತ್ತೀಚೆಗೆ ಆರೋಪಿಸಿತ್ತು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry