ಮಂಗಳವಾರ, ಜೂನ್ 22, 2021
22 °C

ಅಮೆರಿಕ ಜಾಹೀರಾತಿಗೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಬಂಗಾಳಿ ಪತ್ರಿಕೆಯೊಂದ­ರಲ್ಲಿ ಪ್ರಕಟವಾದ ಅಮೆರಿಕ ಮೂಲದ ಸಿದ್ಧ ಉಡುಪು ಸಂಸ್ಥೆಯ ಜಾಹೀ­ರಾತು ಸಂಬಂಧಿ ಲೇಖನ ಪ್ರತಿಭಟ­ನೆಯ ಕಿಡಿ ಹೊತ್ತಿಸಿದೆ.ಬಾಂಗ್ಲಾದೇಶ ಮೂಲದ ಅಮೆರಿ­ಕದ ಅರೆನಗ್ನ ರೂಪದರ್ಶಿಯ ಚಿತ್ರ  ಹಾಗೂ ಆಕ್ಷೇಪಾರ್ಹ ಲೇಖನ  ವಿರೋ­­­ಧಿಸಿ ಮುಸ್ಲಿಂ ಸಂಘಟನೆಗಳು ಮಂಗಳ­­ವಾರ ಪ್ರತಿಭಟನೆ ನಡೆಸಿದವು.ಪ್ರತಿಭಟನೆ ಕಾಲಕ್ಕೆ ಪೊಲೀಸ್‌ ವಾಹನ ಹಾಗೂ  ಬಸ್‌ಗಳಿಗೆ ಬೆಂಕಿ ಹಚ್ಚ­ಲಾಗಿದೆ. ವರದಿಗಾಗಿ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಲಾಗಿದೆ.ಈ ಜಾಹೀರಾತು ಅತ್ಯಂತ ಕೀಳು ಮಟ್ಟದ ಅಭಿರುಚಿ ಮತ್ತು ತಮ್ಮ ಧರ್ಮಕ್ಕೆ ವಿರೋಧವಾದ ಆಕ್ಷೇ­ಪಾರ್ಹ ಅಂಶಗಳಿಂದ ಕೂಡಿದೆ ಎಂದು ಪ್ರತಿ­ಭಟ­ನಾ­ಕಾರರು ಆರೋಪಿಸಿ­ದ್ದಾರೆ. ಆದರೆ, ಈ ವಿವಾದ ಕುರಿತು ಪತ್ರಿಕೆಯ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜಾಹೀರಾತು ಅಮೆರಿಕ, ಬ್ರಿಟನ್‌ ಸೇರಿದಂತೆ ಅನೇಕ ರಾಷ್ಟ್ರ­ಗಳಲ್ಲಿ ಪ್ರತಿ­ಭಟ­ನೆಯ ಕಿಡಿ ಹೊತ್ತಿಸಿದೆ.

ರೂಪದರ್ಶಿ ಬಾಂಗ್ಲಾ ಮೂಲದವ­ಳಾದ ಕಾರಣ ಈ ಜಾಹೀರಾತು  ಬಾಂಗ್ಲಾ­­­ದೇಶ­ದಲ್ಲೂ ಭಾರಿ ವಿವಾ­ದಕ್ಕೆ ಕಾರಣವಾಗಿದೆ. ಜಾಹೀ­ರಾತು ವಿರೋಧಿಸಿ ಅಲ್ಲಿಯೂ ಭಾರಿ ಸಂಖ್ಯೆ­ಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಕೋಲ್ಕತ್ತದಲ್ಲಿರುವ ಬಾಂಗ್ಲಾ­ದೇಶದ ರಾಯಭಾರ ಕಚೇರಿಯ ಮೂಲ­­ಗಳು ತಿಳಿಸಿವೆ.ಈ ಜಾಹೀರಾತು ಲೇಖನದಲ್ಲಿ ಅಮೆರಿಕ ತನ್ನ ಸಿದ್ಧ ಉಡುಪುಗಳು ಇನ್ನುಳಿದ ಕಂಪೆನಿಯ ಉತ್ಪನ್ನಗಳಿಗಿಂತ ಹೇಗೆ ವಿಭಿನ್ನ ಹಾಗೂ ಶ್ರೇಷ್ಠ ಎಂದು ಹೇಳಿಕೊಂಡಿದೆ.  ತನ್ನ ಉತ್ಪನ್ನ ಸಿದ್ಧಸೂತ್ರದಲ್ಲಿ ತಯಾ­ರಾದರೆ,  ಬಾಂಗ್ಲಾದೇಶದ ಕಾರ್ಖಾ­ನೆಗಳಲ್ಲಿ ತಯಾರಾಗುವ ಇತರ ಕಂಪೆನಿಗಳ ಉಡುಪುಗಳು ಕಳಪೆ­ಯಾ­ಗಿವೆ ಎಂದು ಜಾಹೀರಾತು ಲೇಖನ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.