ಶುಕ್ರವಾರ, ಮೇ 7, 2021
19 °C

ಅಮೆರಿಕ ವಿರುದ್ಧ ಪಾಕ್ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ):  ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಅಮೆರಿಕ ಮಾಡಿರುವ ಆರೋಪಕ್ಕೆ ಅಸಮಾಧಾನಗೊಂಡಿರುವ ಪಾಕಿಸ್ತಾನ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದೆ.ಅಮೆರಿಕ ಮಾಡಿರುವ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್, ಅಮೆರಿಕವು ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದ್ದಾರೆ.`ನೀವು ಒಂದು ರಾಷ್ಟ್ರದ ಸ್ನೇಹವನ್ನು ಕಳೆದುಕೊಳ್ಳಲಿದ್ದೀರಿ ಎಂದು ನಾವು ಅಮೆರಿಕಕ್ಕೆ ತಿಳಿಸಿದ್ದೇವೆ. ಪಾಕಿಸ್ತಾನದಿಂದ ಪಾಕಿಸ್ತಾನ ನಾಗರಿಕರನ್ನು ಪ್ರತ್ಯೇಕಗೊಳಿಸಲು ನಿಮಗೆ ಸಾಧ್ಯವಿಲ್ಲ~ ಎಂದು ಖರ್ ಹೇಳಿದ್ದಾರೆ.`ಒಂದು ವೇಳೆ ಅಮೆರಿಕ ಅದಕ್ಕೆ ಯತ್ನಿಸಿದರೆ, ಅವರೇ ಬೆಲೆ ತೆರಬೇಕಾಗುತ್ತದೆ~ ಎಂದೂ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.