ಜೈಪುರ (ಪಿಟಿಐ): ರಾಹುಲ್ ದ್ರಾವಿಡ್ ಸಾರಥ್ಯದ ರಾಜಸ್ತಾನ ರಾಯಲ್ಸ್ ಎದುರು ತವರಿನ ಅಂಗಳದಲ್ಲೇ ಸೋಲು ಕಂಡ ಆ ಕಹಿ ನೆನಪು ಇನ್ನೂ ಮನಸ್ಸಿನೊಳಗೆ ಕುದಿಯುತ್ತಿದೆ. ಆ ಸೋಲಿಗೆ ಸೇಡು ತೀರಿಸಿಕೊಳ್ಳುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಗುರಿ.

ಹ್ಯಾಟ್ರಿಕ್ ಸೋಲುಗಳ ಬಳಿಕ ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಚಾಲೆಂಜರ್ಸ್ಗೆ ಮುಖ್ಯ ಬಲ ಕ್ರಿಸ್ ಗೇಲ್. ಏಕೆಂದರೆ ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಲು ಕಾರಣ ವೆಸ್ಟ್ಇಂಡೀಸ್ನ ಈ ಬ್ಯಾಟ್ಸ್ಮನ್. ಸೋಲಿನ ದವಡೆಯಲ್ಲಿದ್ದ ತಂಡವನ್ನು ರಕ್ಷಿಸಿದ ಶ್ರೇಯ ಅವರಿಗೆ ಸಲ್ಲಬೇಕು. ಪುಣೆ ವಾರಿಯರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಅವರು ಗಳಿಸಿದ್ದ 87 ಹಾಗೂ 84 ರನ್ಗಳ ಇನಿಂಗ್ಸ್ ರೋಚಕ ತಿರುವು ನೀಡಿತ್ತು.

ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಆತಿಥೇಯ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಲು ಸೋಮವಾರ ರಾತ್ರಿ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ತಂಡದ ಪೂರ್ಣ ಭರವಸೆ ಗೇಲ್ ಕೈಯಲ್ಲಿದೆ.
ಈ ತಂಡ ಯಶಸ್ಸು ಕಾಣಲು ಸಾಧ್ಯವಾಗಿರುವುದು ಬ್ಯಾಟ್ಸ್ಮನ್ಗಳ ಅದ್ಭುತ ಪ್ರದರ್ಶನದ ಮೂಲಕ. ಗೇಲ್, ಮಾಯಂಕ್ ಅಗರ್ವಾಲ್, ಎಬಿ ಡಿವಿಲಿಯರ್ಸ್ ಹಾಗೂ ಸೌರಭ್ ತಿವಾರಿ ಆಕ್ರಮಣಕಾರಿ ಆಟದ ಮೂಲಕ ತಂಡದ ಆಪತ್ಬಾಂಧವರು ಎನಿಸುತ್ತಿದ್ದಾರೆ. ಕೊನೆಯ ಎರಡು ಗೆಲುವುಗಳು ಉಳಿದ ಆಟಗಾರರಲ್ಲೂ ವಿಶ್ವಾಸಕ್ಕೆ ಕಾರಣವಾಗಿವೆ.

ಆದರೆ ಬೌಲಿಂಗ್ ಸಮಸ್ಯೆ ಎದ್ದು ಕಾಣುತ್ತಿದೆ. ದುಬಾರಿ ಆಗುತ್ತಿರುವುದು ಇದಕ್ಕೆ ಕಾರಣ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 205 ರನ್ ಗಳಿಸಿಯೂ ಸೋತದ್ದು ಅದಕ್ಕೊಂದು ಉದಾಹರಣೆ. ಎಂದಿನಂತೆ ಐದನೇ ಬೌಲರ್ ಸಮಸ್ಯೆ ಮುಂದುವರಿದಿದೆ. ವಿರಾಟ್ ಕೊಹ್ಲಿ ಫಾರ್ಮ್ ಕೂಡ ಚಿಂತೆಗೆ ಕಾರಣವಾಗಿದೆ.

ರಾಯಲ್ ಚಾಲೆಂಜರ್ಸ್ ಇದುವರೆಗೆ ಆರು ಪಂದ್ಯ ಆಡಿದ್ದು ಮೂರರಲ್ಲಿ ಗೆದ್ದಿದೆ. ಅಷ್ಟೇ ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ಆರು ಪಾಯಿಂಟ್ಗಳೊಂದಿಗೆ ಏಳನೇ ಸ್ಥಾನದಲ್ಲಿದೆ.ಆದರೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ತಾನ ರಾಯಲ್ಸ್ ಅಪಾಯಕಾರಿ ತಂಡ. ಶೇನ್ ವಾರ್ನ್ ಬಳಿಕ ಈ ತಂಡದ ಸಾರಥ್ಯ ವಹಿಸಿರುವ ದ್ರಾವಿಡ್ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜೊತೆಗೆ ಸಹ ಆಟಗಾರರಿಗೆ ಸ್ಫೂರ್ತಿಯ ಕಣಜವಾಗಿದ್ದಾರೆ.

ಐದನೇ ಆವೃತ್ತಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿರುವ ಅಜಿಂಕ್ಯ ರಹಾನೆ ಎದುರಾಳಿ ಬೌಲರ್ಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮೊದಲ ಶತಕ ಗಳಿಸಿದ ಆಟಗಾರ ಎಂಬ ಶ್ರೇಯ ಹೊಂದಿರುವ ಅವರು ಸ್ಥಿರ ಆಟವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ.

ಜೊತೆಗೆ ಒವೇಸ್ ಷಾ ಹಾಗೂ ಕೆವೊನ್ ಕೂಪರ್ ಕೂಡ ಉತ್ತಮ ಪ್ರದರ್ಶನದ ಮೂಲಕ ಈ ತಂಡದ ಬೆನ್ನೆಲುಬು ಎನಿಸಿದ್ದಾರೆ.ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು ಕಂಡಿದ್ದರೂ ಮತ್ತೆ ಜಯದ ಟ್ರ್ಯಾಕ್ಗೆ ಮರಳುವ ವಿಶ್ವಾಸದಲ್ಲಿ ರಾಯಲ್ಸ್ ತಂಡವಿದೆ. ಬೌಲಿಂಗ್ ವಿಭಾಗದಲ್ಲಿ ದೇಶಿ ಆಟಗಾರರಾದ ಸಿದ್ಧಾರ್ಥ್ ತ್ರಿವೇದಿ, ಅಮಿತ್ ಸಿಂಗ್ ಹಾಗೂ ಪಂಕಜ್ ಸಿಂಗ್ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ.

ಸೂಪರ್ ಕಿಂಗ್ಸ್ ಎದುರು ಆಲ್ರೌಂಡರ್ ಸ್ಟುವರ್ಟ್ ಬಿನ್ನಿಗೆ ಅವಕಾಶ ನೀಡಲಾಗಿತ್ತು. ಆದರೆ ಆ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಂಡಿರಲಿಲ್ಲ. ಹಾಗಾಗಿ ವೇಗದ ಬೌಲರ್ ಶಾನ್ ಟೇಟ್ ಕಣಕ್ಕಿಳಿದರೂ ಅಚ್ಚರಿ ಇಲ್ಲ.

ಪಂದ್ಯ ಆರಂಭ: ರಾತ್ರಿ 8.00ಕ್ಕೆ, ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.