ಬೆಂಗಳೂರು: `ರಾಜ್ಯಕ್ಕೆ ಪ್ರಸ್ತುತ ದಿನಗಳಲ್ಲಿ ಬೇಕಾಗಿರುವುದು ದೇವರಾಜ ಅರಸು ಅವರ ಮಾದರಿಯೇ ಹೊರತು ಮೋದಿ ಮಾದರಿಯಲ್ಲ~ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ್ದ ವರದಿಯ ಪುಸ್ತಕರೂಪ `ಸಂಕುಲ~ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ರಾಜ್ಯಕ್ಕೆ ಮೋದಿ ಮಾದರಿಯ ಸರ್ಕಾರ ತರುತ್ತೇವೆ ಎಂಬ ಅಬ್ಬರ ರಾಜಕೀಯ ವಲಯದಿಂದ ಹೆಚ್ಚಾಗುತ್ತಿದೆ. ಆದರೆ ವಾಸ್ತವವಾಗಿ ಶೋಷಿತರ ವಿರುದ್ಧವಾದ ಆಡಳಿತ ಗುಜರಾತ್ ರಾಜ್ಯದಲ್ಲಿದೆ. ಭ್ರಮೆಯನ್ನು ಸೃಷ್ಟಿಸುತ್ತಿರುವ ರಾಜ್ಯದ ರಾಜಕಾರಣಿಗಳಿಗೆ ಮೋದಿ ಸರ್ಕಾರದ ಅವಧಿಯಲ್ಲಿ ಗುಜರಾತ್ನಲ್ಲಿ ನಡೆದ ನರಮೇಧಗಳು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು ಮುಖ್ಯವಾಗುತ್ತಿಲ್ಲ. ಬಂಡವಾಳ ಶಾಹಿತ್ವಕ್ಕೆ ತಲೆಬಾಗುವ ಗುಜರಾತ್ನ ಮೋದಿ ಮಾದರಿ ನಮ್ಮ ರಾಜ್ಯಕ್ಕೆ ಅಗತ್ಯವಿಲ್ಲ. ಬದಲಿಗೆ ರಾಜ್ಯದಲ್ಲಿ ಶೋಷಿತರ ಪರವಾಗಿದ್ದ ದೇವರಾಜ ಅರಸು ಅವರ ಆಡಳಿತ ಮಾದರಿಯಾಗಬೇಕು~ ಎಂದು ಆಶಿಸಿದರು.

ನಾಟಕಕಾರ ಡಾ.ಕೆ.ಮರುಳಸಿದ್ಧಪ್ಪ ಮಾತನಾಡಿ, `ಸಮಾಜದ ಮೇಲ್ಜಾತಿಗಳ ಬಡವರು ಜಾತಿಯ ಸಹಾಯದಿಂದ ಬೆಳೆಯುತ್ತಾರೆ. ಆದರೆ ಹಿಂದುಳಿದ ಸಮುದಾಯಗಳ ಜನರಿಗೆ ಯಾವುದೇ ಸಹಾಯಗಳಿಲ್ಲದೇ ಅಲ್ಲಿನ ಬಡತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಸಾಯುತ್ತಾರೆ.

ಅಸಂಘಟಿತ ಸಮುದಾಯಗಳ ಬಗ್ಗೆ ವರದಿ ಹೇಳುವ ಅಂಶಗಳನ್ನು ಸರ್ಕಾರ ಜಾರಿಗೆ ತರುವ ಬಗ್ಗೆ ಮನಸ್ಸು ಮಾಡಬೇಕು~ ಎಂದು ಅವರು ಒತ್ತಾಯಿಸಿದರು.ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, `ಆಯೋಗದ ವರದಿಯನ್ನು ಪ್ರಕಟಿಸಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದರು.

ಸಮಾರಂಭದಲ್ಲಿ ಡಾ.ಬಾಲಗುರುಮೂರ್ತಿ, ಎಸ್.ವೀಣಾ, ತೇಜಸ್ವಿನಿ ಹಾಗೂ ವನಿತಾ ಅವರು ಬುಡಕಟ್ಟು ಜನರು, ಲಿಂಗತ್ವ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಮಿಕರು ಮತ್ತು ಎಚ್ಐವಿ ಸೋಂಕಿತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಅವಿರತ ಪ್ರಕಾಶನದ ವಿ.ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.