ಅರುಣಾಚಲ ಪ್ರದೇಶ: ಹೊಸ ಸರ್ಕಾರ?

7

ಅರುಣಾಚಲ ಪ್ರದೇಶ: ಹೊಸ ಸರ್ಕಾರ?

Published:
Updated:
ಅರುಣಾಚಲ ಪ್ರದೇಶ: ಹೊಸ ಸರ್ಕಾರ?

ಇಟಾ ನಗರ (ಪಿಟಿಐ): ಅರುಣಾಚಲ ಪ್ರದೇಶದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ನಬಾಮ್ ತುಕಿ ಅವರ ಬದಲಾಗಿ  ಪೆಮಾ ಖಂಡು ಅವರನ್ನು ಆಯ್ಕೆ ಮಾಡಲಾಗಿದೆ.ಇಬ್ಬರು ಪಕ್ಷೇತರರೂ ಸೇರಿ 47 ಶಾಸಕರ ಬೆಂಬಲದೊಂದಿಗೆ ಖಂಡು ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಅಚ್ಚರಿಯ ಬೆಳವಣಿಯೊಂದರಲ್ಲಿ ಪಕ್ಷದಿಂದ ಬಂಡಾಯವೆದ್ದು ಮುಖ್ಯಮಂತ್ರಿಯಾಗಿದ್ದ ಕಲಿಖೋ ಪುಲ್ ಅವರು 30 ಬಂಡಾಯ ಶಾಸಕರೊಂದಿಗೆ ಶಾಸಕಾಂಗ ಸಭೆಗೆ ಹಾಜರಾಗಿದ್ದರು.ಬಹುಮತ ಸಾಬೀತಿಗೆ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು 37 ವರ್ಷದ ಪೆಮಾ ಖಂಡು ಅವರನ್ನು ನೂತನ ನಾಯಕನ್ನಾಗಿ ಆಯ್ಕೆ ಮಾಡಿತು. ಇವರು ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಪುತ್ರ.ನಬಾಮ್ ತುಕಿ ಅವರು ಪೆಮಾ ಖಂಡು ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸಭೆಯಲ್ಲಿ ಹಾಜರಿದ್ದ 44 ಶಾಸಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಸ್ಪೀಕರ್ ನಬಾಮ್ ರೆಬಿಯಾ ಅವರು ಸಭೆಗೆ ಬರಲಿಲ್ಲ. ಆದರೆ ಪದಚ್ಯುತ ಮುಖ್ಯಮಂತ್ರಿ ಕಲಿಖೋ ಪುಲ್ ಹಾಗೂ ಬಂಡಾಯ ಶಾಸಕರು ಬೆಂಬಲ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry