ಸೋಮವಾರ, ಜನವರಿ 20, 2020
21 °C

ಅರ್ಧಕ್ಕೇ ಹಾರಿಸಿದ ಧ್ವಜ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ರಾಷ್ಟ್ರಧ್ವಜವನ್ನು ಗುರುವಾರ ಅರ್ಧಕ್ಕೆ ಹಾರಿಸಿ ಪ್ರಮಾದ ಎಸಗಲಾಗಿದೆ. ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಬದ ಅರ್ಧಕ್ಕೆ ಧ್ವಜವನ್ನು ಹಾರಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಧ್ವಜಾರೋಹಣ ಮಾಡಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುಂಡಯ್ಯ ಧ್ವಜ ಕಟ್ಟಿದ್ದಾಗಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಪಿಡಿಓ ಹುದ್ದೆಗೆ ಬರುವ ಮೊದಲು ನಾನು ಶಿಕ್ಷಕನಾಗಿದ್ದೆ. ನಾನೇ ರಾಷ್ಟ್ರಧ್ವಜವನ್ನು ಕಟ್ಟಿದ್ದೇನೆ. ಹಗ್ಗ ತುಂಡಾಗಿದ್ದರಿಂದ ಧ್ವಜ ಅರ್ಧಕ್ಕೆ ಜಾರಿದೆ~ ಎಂದು ಅವರು ಹೇಳಿದ್ದಾರೆ.ತಲೆಕೆಳಗಾದ ಬಾವುಟ

ಬಾಗೇಪಲ್ಲಿ:
ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣದ ಎರಡು ಕಡೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ.ಪಟ್ಟಣದ ಸಂತೆಮೈದಾನದ ರಸ್ತೆಯಲ್ಲಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಚೇರಿ ಕಟ್ಟಡದ ಮೇಲೆ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಲಾಯಿತು. ನಂತರ ಎಚ್ಚೆತ್ತುಕೊಂಡ ಬ್ಯಾಂಕ್ ಸಿಬ್ಬಂದಿ ಧ್ವಜವನ್ನು ಸರಿಪಡಿಸಿದರು.ಪಟ್ಟಣದ ಗೂಳೂರು ರಸ್ತೆಯಲ್ಲಿ ಇರುವ ಸಿಟಿಜನ್ ರಿಕ್ರಿಯೇಷನ್ಸ್ ಕ್ಲಬ್ ಕಟ್ಟಡದ ಮೇಲೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು. ನಂತರ ಸರಿಪಡಿಸಲಾಯಿತು.

 

ಪ್ರತಿಕ್ರಿಯಿಸಿ (+)