ಸೋಮವಾರ, ಮಾರ್ಚ್ 8, 2021
31 °C

ಅರ್ಪಿತಾ, ಅಪೂರ್ವಾ ಭರತನಾಟ್ಯ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಪಿತಾ, ಅಪೂರ್ವಾ ಭರತನಾಟ್ಯ ರಂಗಪ್ರವೇಶ

ಶುಭಾಂಜಲಿ ಸ್ಕೂಲ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನಲ್ಲಿ ಭರತನಾಟ್ಯ ಅಭ್ಯಸಿಸುತ್ತಿರುವ ಅರ್ಪಿತಾ ಗೋರೂರ್‌ ಮತ್ತು ಅಪೂರ್ವಾ ಜಗದೀಶ್‌ ಅವರ ಭರತನಾಟ್ಯ ರಂಗಪ್ರವೇಶ ಇದೇ ಶನಿವಾರ (ಆಗಸ್ಟ್‌ 20) ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆಯಲಿದೆ.16 ವರ್ಷದ ಅರ್ಪಿತಾ ಗೋರೂರ್‌ ಅವರು ಕಳೆದ ಎಂಟು ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಹಲವಾರು ಸ್ಫರ್ಧೆಗಳಲ್ಲಿ ವಿಜಯಿಯಾಗಿರುವ ಶುಭಾಂಜಲಿ ನೃತ್ಯ ತಂಡದ ಭಾಗವೂ ಆಗಿರುವ ಅರ್ಪಿತಾ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾರೆ. ಐದು ವರ್ಷದವರಿದ್ದಾಗಿನಿಂದಲೇ ಹರಿಕಥೆಗಳಲ್ಲಿ ಭಾಗವಹಿಸುತ್ತಿದ್ದ ಅರ್ಪಿತಾ, ತರಂಗ ತಂಡದ ಅನೇಕ ನಾಟಕಗಳಲ್ಲಿಯೂ ನಟಿಸಿದ್ದಾರೆ.ಇವರ ಗಾಯನ–ನೃತ್ಯ ಎರಡೂ ಪ್ರತಿಭೆಗಳಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಭವಿಷ್ಯದಲ್ಲಿ ಭರತನಾಟ್ಯ ಮತ್ತು ಸಂಗೀತ ಎರಡೂ ಕ್ಷೇತ್ರಗಳಲ್ಲಿ ಸಾಧನೆಗೈಯುವ ಹಂಬಲ ಇರುವ ಅರ್ಪಿತಾ ಈ ರಂಗಪ್ರವೇಶ ತಮ್ಮ ಸಾಧನೆಯ ಶಿಖರ ಏರುವ ಮೊದಲ ಮೆಟ್ಟಿಲು ಎಂದು ಭಾವಿಸುತ್ತಾರೆ.ಅರ್ಪಿತಾ ಹಾಗೂ ಅಪೂರ್ವಾ ಅಮೆರಿಕಾದಲ್ಲೇ ಹುಟ್ಟಿ ಬೆಳೆದಿದ್ದರೂ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಮನಸೋತಿದ್ದಾರೆ.  ಕಳೆದ ಆರು ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆಯುತ್ತಿರುವ ಅಪೂರ್ವಾ ಜಗದೀಶ್‌ ಅವರಿಗೂ ಈಗ ಹದಿನಾರು ವರ್ಷ. ಇವರು ಕಳೆದ ಹತ್ತು ವರ್ಷಗಳಿಂದ ಇಂಡಿಯನ್‌ ಅಸೋಸಿಯೇಷನ್‌ ಸ್ಪ್ರಿಂಗ್‌ ಡಾನ್ಸ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.ಶಾಲಾ ದಿನಗಳಲ್ಲಿ ಸಿಂಫೋನಿ ಆರ್ಕೆಸ್ಟ್ರಾ ತಂಡದ ಸದಸ್ಯರಾಗಿದ್ದ ಅವರು ಈಗ ಹೆಬಿಟೇಟ್‌ ಪಾರ್‌ ಹ್ಯೂಮೆನಿಟಿ ಕ್ಲಬ್‌ನ ಸದಸ್ಯರಾಗಿದ್ದಾರೆ. ಭರತನಾಟ್ಯದಲ್ಲಿ ಅತೀವ ಆಸಕ್ತಿ ಹೊಂದಿರುವ ಅಪೂರ್ವ ಅವರಿಗೆ ಆ ಆಸಕ್ತಿಗೆ ತಕ್ಕ ಹಾಗೆ ಬದ್ಧತೆಯೂ ಇದೆ. ಈ ರಂಗಪ್ರವೇಶ ತಮ್ಮ ಬಹುದೀರ್ಘ ನಾಟ್ಯಪಯಣದ ಮೊದಲ ಹೆಜ್ಜೆ ಎಂದು ಅವರು ಭಾವಿಸುತ್ತಾರೆ.ಈ ಇಬ್ಬರೂ ಕಲಾವಿದರೂ ಗುರು ಶುಭಾ ರಮೇಶ್‌ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಶುಭಾಂಜಲಿ ಸ್ಕೂಲ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನ ವಿದ್ಯಾರ್ಥಿಗಳು.ಕಾರ್ಯಕ್ರಮದ ವಿವರಗಳು

ಕಲಾವಿದರು: ಅರ್ಪಿತಾ ಗೋರೂರ್‌ ಮತ್ತು ಅಪೂರ್ವಾ ಜಗದೀಶ್‌.ಗುರುಗಳು: ಶುಭಾ ಪಾರ್ಮರ್‌. ಗಾಯನ– ಗೋಮತಿ ನಾಯಗಂ, ಮೃದಂಗ– ಶಕ್ತಿವೇಲು ಮುರುಗನಾಥ್‌, ವಯೊಲಿನ್‌– ಶಿವಮಣಿ ನಟರಾಜನ್‌, ಕೊಳಲು– ಸಂಕಪಿಳ್ಳಿ ಸುನಿಲ್‌ಕುಮಾರ್‌.ಸ್ಥಳ: ರಿಟ್ಜ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಸೆಂಟರ್‌, 268, ಸದರನ್‌ ಫಿನ್ಲೇ ಅವೆನ್ಯೂ, ಬಾಸ್ಕಿಂಗ್‌ ರಿಡ್ಜ್‌. ಶನಿವಾರ ಸಂಜೆ 4.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.