ಭಾನುವಾರ, ಮೇ 22, 2022
21 °C

ಅಲ್ಪಾವಧಿಯಲ್ಲೇ ಕಡಿದು ಹೋದ ಮಂಗಳಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮಾಡಿಸಿದ ಕೆಲವೇ ತಿಂಗಳಲ್ಲಿ ಚಿನ್ನದ ಮಂಗಳಸೂತ್ರ ಕಡಿದು ಹೋದ ಪ್ರಕರಣವೊಂದಕ್ಕೆ ಸಂಬಂಧಿಸಿ ಜಿಲ್ಲಾ ಗ್ರಾಹಕರ ವೇದಿಕೆ ಚಿನ್ನದ ವ್ಯಾಪಾರಿಯೊಬ್ಬರಿಗೆ ದಂಡ ವಿಧಿಸಿ ತೀರ್ಪು ನೀಡಿದೆ.ನಗರದ ಉಸ್ಮಾನ್‌ಗಂಜ್‌ನ ಚಿನ್ನದ ವ್ಯಾಪಾರಿ ಶಿವರಾಜ ಬಿರಾದಾರ್ ದಂಡಕ್ಕೆ ಒಳಗಾದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ನಿವಾಸಿ ರೇಣುಕಾ ಸಂತೋಷ ಶ್ರೀಮಾಳೆ ವೇದಿಕೆಯ ಮೊರೆ ಹೋಗಿ ನ್ಯಾಯ ಪಡೆದವರು.ಮಾನಸಿಕ ವ್ಯಥೆ, ನಷ್ಟ ಹಾಗೂ ಖರ್ಚು- ವೆಚ್ಚಕ್ಕಾಗಿ ರೇಣುಕಾ ಅವರಿಗೆ ರೂ. 2 ಸಾವಿರ ಪರಿಹಾರ ಒದಗಿಸಲು ವೇದಿಕೆ ಆದೇಶಿಸಿದೆ. ಅಲ್ಲದೆ, ಯಾವುದೇ ಖರ್ಚಿಲ್ಲದೇ 15 ದಿನಗಳ ಒಳಗೆ ಮಂಗಳಸೂತ್ರವನ್ನು ದುರಸ್ತಿ ಮಾಡಿಸಿಕೊಡುವಂತೆ ವ್ಯಾಪಾರಿಗೆ ಸೂಚಿಸಿದೆ.2008 ರ ಸೆಪ್ಟೆಂಬರ್‌ನಲ್ಲಿ ರೂ. 49,905 ಪಾವತಿಸಿ ತಾನು ಬಿರಾದಾರ್ ಅವರ ಅಂಗಡಿಯಲ್ಲಿ ಮಂಗಳಸೂತ್ರ ಮಾಡಿಸಿದ್ದೆ. ಅದನ್ನು ಉಪಯೋಗಿಸಲು ಆರಂಭಿಸಿದ 8-10 ತಿಂಗಳಲ್ಲಿಯೇ ಮಂಗಳಸೂತ್ರ ಕಡಿದು ಹೋಯಿತು. ನಂತರ ದಾರ ಕಟ್ಟಿ ಅದನ್ನು ಬಳಸಲಾಯಿತು ಎಂದು ರೇಣುಕಾ ವೇದಿಕೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು.

ವಿಚಾರಣೆ ಹಂತದಲ್ಲಿ  `ಸರಿಯಾದ ರೀತಿಯಲ್ಲಿ ಉಪಯೋಗಿದ ಕಾರಣ ಹೀಗಾಗಿದೆ. ಇದಕ್ಕೆ ತಾನು ಕಾರಣನಲ್ಲ, ದುರಸ್ತಿ ಮಾಡಿಕೊಡುವ ಜವಾಬ್ದಾರಿಯೂ ತನ್ನದಲ್ಲ ಎಂದು ವ್ಯಾಪಾರಿ ವಾದಿಸಿದರು. ವಿಚಾರಣೆ ನಡೆಸಿದ ವೇದಿಕೆಯು ರೇಣುಕಾ ಅವರಿಗೆ ಪರಿಹಾರ ಕೊಡುವ ಜೊತೆಗೆ ಹಾಳಾಗಿರುವ ಮಂಗಳಸೂತ್ರವನ್ನು ರಿಪೇರಿ ಮಾಡಿಕೊಡುವಂತೆ ಮೇ 25 ರಂದು ತೀರ್ಪಿತ್ತಿದೆ.ಜಿಲ್ಲಾ ಗ್ರಾಹಕರ ವೇದಿಕೆಯ ಸದಸ್ಯೆ ಭಾರತಿ ಪಾಟೀಲ್ ಆದೇಶ ಪ್ರಕಟಿಸಿದ್ದಾರೆ. ದೂರುದಾರರ ಪರ ವಕೀಲ ಕೇಶವರಾವ್ ಶ್ರೀಮಾಳೆ ವಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.