ಮಂಗಳವಾರ, ಜೂನ್ 15, 2021
20 °C

ಅಲ್ಲಾಬಕ್ಷ್‌ ಜಾಮೀನು ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಿಷೇಧಿತ ಸಿಮಿ ಸಂಘಟನೆಯ ಸದಸ್ಯ ಎಂಬ ಆರೋಪ­ದಡಿ ಬಂಧಿತನಾಗಿರುವ ವೈದ್ಯಕೀಯ ವಿದ್ಯಾರ್ಥಿ ಅಲ್ಲಾಬಕ್ಷ ಯಾದವಾಡ ಸಲ್ಲಿ­ಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಪೀಠ ಬುಧ­ವಾರ ತಿರಸ್ಕರಿಸಿತು.ಸುಪ್ರೀಂ ಕೋರ್ಟ್‌ ನೀಡಿದ್ದ 1 ವರ್ಷ ಗಡುವಿನಲ್ಲಿ ಪ್ರಕರ­ಣದ ವಿಚಾ­ರಣೆ ಪೂರ್ಣಗೊಳಿಸದ ಹಿನ್ನೆಲೆ­­ಯಲ್ಲಿ ಅಲ್ಲಾಬಕ್ಷ ಹೈ­ಕೋರ್ಟ್‌­ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ.  ನ್ಯಾಯ­ಮೂರ್ತಿ ಕೆ.ಎನ್‌.­ಫಣೀಂದ್ರ ಅವರಿದ್ದ ಏಕ­ಸದಸ್ಯಪೀಠ, ‘ಹುಬ್ಬ­ಳ್ಳಿಯ 1ನೇ ಅಧಿಕ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿ­ರುವ ವಿಚಾರಣೆಯಲ್ಲಿ ವಿಳಂಬ­­ವಾಗಿದೆ.ಅದಕ್ಕೆ ಕಾರಣಗಳೂ ಇವೆ. ಆದರೆ ರಾಷ್ಟ್ರೀಯ ಭದ್ರತೆ­ಯಂತಹ ಗಂಭೀರ ಪ್ರಕರಣದ ವಿಚಾ­ರ­ಣೆಯಲ್ಲಿ ವಿಳಂಬ ಸರಿಯಲ್ಲ. ಅಲ್ಲದೇ, ಆರೋಪಿಯ ವಿರುದ್ಧ ದೋಷಾ­­ರೋಪಣಾ ಪಟ್ಟಿಯಲ್ಲಿ ವಿವಿಧ ಕಲಂಗಳಡಿ ದಾಖಲಿಸಿರುವ ಆರೋಪ­ಗಳು ಗಂಭೀರ ಸ್ವರೂಪದ್ದಾ­ಗಿವೆ’ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕರಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.