ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಹತ್ಯೆ

ವಾಷಿಂಗ್ಟನ್ (ಪಿಟಿಐ): ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ರೂವಾರಿ ಹಾಗೂ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ (54) ಭಾನುವಾರ ರಾತ್ರಿ ಅಮೆರಿಕಾ ಸೇನೆ ನಡೆಸಿದ ಮಿಲಿಟರಿ ದಾಳಿಯಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ಬಳಿ ಹತನಾಗಿದ್ದು, ಆತನ ಶವ ಅಮೆರಿಕಾ ಸೇನೆಯ ವಶದಲ್ಲಿದೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಶ್ವೇತಭವನದ ಮುಂದೆ ಸುದ್ದಿಗಾರರಿಗೆ ಕಾರ್ಯಾಚರಣೆಯ ವಿವರ ನೀಡಿದ ಒಬಾಮಾ ‘ಕಳೆದ ವಾರವೇ ನಮಗೆ ಲಾಡೆನ್ ಅಡಗುತಾಣ ಕುರಿತಾಗಿ ಗುಪ್ತಚರ ಮಾಹಿತಿ ದೊರೆತಿತ್ತು. ನನ್ನ ನಿದೇರ್ಶನದಂತೆ ಭಾನುವಾರ ಇಸ್ಲಾಮಾಬಾದ್‌ನಿಂದ ಉತ್ತರಕ್ಕೆ150 ಕಿ.ಮೀ ದೂರದಲ್ಲಿರುವ ಅಬೋಟಾಬಾದ್‌ನಲ್ಲಿನ ಲಾಡೆನ್ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿ ಹತ್ಯೆಗೈಯಲಾಗಿದೆ. ಇದೊಂದು ಮಹತ್ವ ಸಾಧನೆ ’ ಎಂದು ತಿಳಿಸಿದರು.
ಸಂಭ್ರಮಾಚರಣೆ: ಜಗತ್ತು ಕಂಡ ಅತಿ ಭಯಾನಕ ಉಗ್ರ ಲಾಡೆನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಮೆರಿಕಾದಾದ್ಯಂತ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆಸಿ ಸುಮಾರು 3000 ಅಮಾಯಕರ ಸಾವಿಗೆ ಆತ ಕಾರಣನಾಗಿದ್ದ. ಅಂದಿನಿಂದ ಅಮೆರಿಕ ಲಾಡೆನ್ ಬೇಟೆಗಾಗಿ ಬೆನ್ನುಹತ್ತಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.