ಅಲ್ ಖೈದಾ ಪ್ರಮುಖ ನಾಯಕ ಶಹರಿ ಹತ್ಯೆ

ಶುಕ್ರವಾರ, ಮೇ 24, 2019
29 °C

ಅಲ್ ಖೈದಾ ಪ್ರಮುಖ ನಾಯಕ ಶಹರಿ ಹತ್ಯೆ

Published:
Updated:

ವಾಷಿಂಗ್ಟನ್, (ಪಿಟಿಐ): ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಪಾಕಿಸ್ತಾನದಲ್ಲಿಯ ಕಾರ್ಯಾಚರಣೆ ಮುಖ್ಯಸ್ಥ ಅಬು ಹಫ್ಸ್ ಅಲ್- ಶಹರಿಯನ್ನು ಪಾಕ್ ವಾಯವ್ಯ ಭಾಗದ ಬುಡಕಟ್ಟು ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.ಈ ಮೂಲಕ, ಪಾಕ್‌ನ ಹಿಂಸಾಪೀಡಿತ ಬುಡಕಟ್ಟು ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧ ಸಮರಕ್ಕೆ ಎದುರಾಗಿದ್ದ ದೊಡ್ಡ ಕಂಟಕ ಪರಿಹಾರವಾದಂತಾಗಿದೆ ಎಂದು ಅಮೆರಿಕದ ಅಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ.ಈ ವಾರದ ಆರಂಭದಲ್ಲಿ ಶಹರಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.ಅಲ್‌ಖೈದಾ ದ್ವಿತೀಯ ನಾಯಕನಾಗಿದ್ದ ಅತಿಹಾನನ್ನು ಕಳೆದ ತಿಂಗಳು ಹತ್ಯೆ ಮಾಡಲಾಗಿತ್ತು. ಈಗ ಪಾಕಿಸ್ತಾನದಲ್ಲಿಯ ಕಾರ್ಯಾಚರಣೆಯ ಮುಖ್ಯಸ್ಥನನ್ನೇ ಹತ್ಯೆ ಮಾಡಿರುವುದರಿಂದ ಈ ಭಯೋತ್ಪಾದಕ ಸಂಘಟನೆಗೆ ಭಾರಿ ಹೊಡೆತ ಬಿದ್ದಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry