ಸೋಮವಾರ, ಜನವರಿ 27, 2020
24 °C

ಅವಳಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹು ಗರ್ಭಧಾರಣೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಐಎಂಎ ಫೆಟಲ್‌ ಕೇರ್ ಹಾಗೂ ಬೆಂಗಳೂರು ಫೆಟಲ್ ಮೆಡಿಸಿನ್ ಸೆಂಟರ್ ಏರ್ಪಡಿಸಿದ್ದ ಅವಳಿ ನಡಿಗೆ – 2013 ಕಾರ್ಯಕ್ರಮಕ್ಕೆ ಶನಿವಾರ ನಗರದ ಕಬ್ಬನ್‌ ಉದ್ಯಾನದಲ್ಲಿ ಚಾಲನೆ ನೀಡಲಾಯಿತು.ಅವಳಿ ನಡಿಗೆ ಪ್ರಾರಂಭವಾಗುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಟರ್‌ನ ವೈದ್ಯಕೀಯ ನಿರ್ದೇಶಕಿ ಡಾ.ಪ್ರತಿಮಾ ರಾಧಾಕೃಷ್ಣನ್‌, ಅವಳಿ ಮಕ್ಕಳು ಜನಿಸುವ ತಾಯಂದಿರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ಬಗ್ಗೆ ಜನರಿಗೆ ಜನರಿಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದರು.ತಾಯಿ ಗರ್ಭ ಧರಿಸಿದ ಮೊದಲ ಮೂರು ತಿಂಗಳಿನಲ್ಲೇ ಬಹು ಗರ್ಭ ಇದೆಯೇ ಎಂದು ತಿಳಿಯಲು ಅಲ್ಟ್ರಾಸೌಂಡ್‌ ಮಾಡಿಸಬೇಕಾಗುತ್ತದೆ. ಈ ಬಗ್ಗೆ ಎಷ್ಟೋ ತಾಯಂದಿರಿಗೆ ಮಾಹಿತಿಯೇ ಇಲ್ಲ ಎಂದು ವಿವರಿಸಿದರು.  ಈ ನಡಿಗೆಯಲ್ಲಿ ೧೨ ಜೋಡಿ ಅವಳಿ ಮಕ್ಕಳು, ಪೋಷಕರು ಹಾಗೂ ಮೆಡಿಕಲ್‌ ಸೆಂಟರ್‌ನ ಸದಸ್ಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)