ಶುಕ್ರವಾರ, ಜೂನ್ 25, 2021
29 °C

ಅಶೋಕ್‌ ಲೇಲ್ಯಾಂಡ್‌ನಿಂದ ಹವಾನಿಯಂತ್ರಿತ ಟ್ರಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದೂಜಾ ಸಮೂಹದ ಒಡೆತನಕ್ಕೆ ಸೇರಿದ ಅಶೋಕ್‌ ಲೇಲ್ಯಾಂಡ್‌ ಶನಿವಾರ ಇಲ್ಲಿ ರಾಜ್ಯ ಮಾರುಕಟ್ಟೆಗೆ ಲಘು ವಾಣಿಜ್ಯ ಬಳಕೆಯ(ಎಲ್‌ಸಿವಿ)  ‘ಪಾರ್ಟ್‌ನರ್‌’ ಟ್ರಕ್‌  ಪರಿಚಯಿಸಿದೆ.‘ಇದು ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ದೇಶದ ಮೊದಲ ‘ಎಲ್‌ಸಿವಿ’ ಸರಕು ಸಾಗಣೆ ವಾಹನ. ನಿಸಾನ್‌ ಕಂಪೆನಿ ಜತೆಗಿನ ಜಂಟಿ ಪಾಲುದಾರಿಕೆಯಲ್ಲಿ ‘ಪಾರ್ಟ್‌ನರ್‌’ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. 2 ಮಾದರಿಗಳಲ್ಲಿ ಇದು ಲಭ್ಯ’ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿ­ಯಲ್ಲಿ ಕಂಪೆ­ನಿಯ ‘ಎಲ್‌ಸಿವಿ’ ವಿಭಾಗದ ಕಾರ್ಯ­ನಿರ್ವಾಹಕ ನಿರ್ದೇಶಕ ನಿತಿನ್‌ ಸೇಠ್‌ ತಿಳಿಸಿದರು. ‘ಪಾರ್ಟ್‌ನರ್‌ 2850 ಡಬ್ಲ್ಯುಬಿ’ನ  ಬೆಂಗಳೂರು ಎಕ್ಸ್‌ಷೋರೂಂ ಬೆಲೆ ₨8.72 ಲಕ್ಷದಿಂದ ಮತ್ತು ‘3350 ಡಬ್ಲ್ಯುಬಿ’ ಮಾದರಿ ಬೆಲೆ ₨9.29 ಲಕ್ಷದಿಂದ ಪ್ರಾರಂಭವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.