ಬೆಂಗಳೂರು: ಕರ್ನಾಟಕದ ಗಾಲ್ಫ್ ಕನಸುಗಾರ, ಉದ್ಯಮಿ ಅಶೋಕ್ ಕುಮಾರ್ ಮೇದ (68) ಅವರು ಈಚೆಗೆ ಫ್ರಾನ್ಸ್ನಲ್ಲಿ ನಿಧನರಾಗಿದ್ದು, ಭಾನುವಾರ ಬಿಡದಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

ಫ್ರಾನ್ಸ್ನ ಮಾಂಟ್ಬ್ಲಾಂಕ್ ಪ್ರದೇಶದ ಚಮೊನಿಕ್ಸ್ನಲ್ಲಿ ಜೂನ್ 15ರಂದು ನಿಧನರಾದ ಅವರ ಪಾರ್ಥಿವ ಶರೀರವನ್ನು ಭಾನುವಾರ ಮುಂಜಾನೆ ಇಲ್ಲಿಗೆ ತರಲಾಯಿತು. ಬಿಡದಿ ಬಳಿಯ `ಈಗಲ್ಟನ್ ವಿಲೇಜ್'ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ ನಡೆದ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಗಾಲ್ಫ್ ಕ್ರೀಡೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಚಾಮುಂಡೇಶ್ವರಿ ಬಿಲ್ಡ್ಟೆಕ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಅಶೋಕ್ ಕುಮಾರ್ ಒಂದೂವರೆ ದಶಕದ ಹಿಂದೆ ಬೆಂಗಳೂರು-ಮೈಸೂರು ರಸ್ತೆಯ ಬಿಡದಿ ಬಳಿ 500 ಎಕರೆ ಪ್ರದೇಶದಲ್ಲಿ ಈಗಲ್ಟನ್ ಗಾಲ್ಫ್ ವಿಲೇಜ್ ನಿರ್ಮಿಸಿದರು.

ಅದರೊಳಗೆ 168 ಎಕರೆಯಲ್ಲಿ 18 ಕುಳಿಗಳಿರುವ ಅತ್ಯುತ್ತಮವಾದ ಗಾಲ್ಫ್ ಕೋರ್ಸ್ ಸ್ಥಾಪಿಸಿದರು. ಅದರೊಳಗಿರುವ ಆಕರ್ಷಕ ಕ್ಲಬ್ಹೌಸ್ ಮತ್ತು 132 ಕೊಠಡಿಗಳಿರುವ ವಸತಿಗೃಹ ಸೌಲಭ್ಯ ಪ್ರಮುಖ ಟೂರ್ನಿಗಳನ್ನು ನಡೆಸಲು ಪೂರಕವಾಯಿತು. ಈ ತೆರನಾದ ಖಾಸಗಿ ಗಾಲ್ಫ್ ರಿಸಾರ್ಟ್ ದೇಶದಲ್ಲಿಯೇ ಮೊದಲನೆಯದು. ಇಲ್ಲಿರುವ ಗಾಲ್ಫ್ ಅಕಾಡೆಮಿಯಲ್ಲಿ ನಿರಂತರ ತರಬೇತಿ ನಡೆಯುತ್ತದೆ. ಈ ಮಾದರಿಯಲ್ಲಿ ಮೈಸೂರಿನಲ್ಲಿಯೂ ಸಧ್ಯದಲ್ಲೇ ಈಗಲ್ಬರ್ಗ್ ಗಾಲ್ಫ್ ಕೇಂದ್ರ ಆರಂಭಗೊಳ್ಳಲಿದೆ.

ಇದೇ ಗಾಲ್ಫ್ ಕೋರ್ಸ್ನಲ್ಲಿ ದಶಕದ ಹಿಂದೆ `ಬಾಲ್ಬಾಯ್' ಆಗಿದ್ದ ಚಿಕ್ಕರಂಗಪ್ಪ ದೇಶದ ಪ್ರಮುಖ ವೃತ್ತಿಪರ ಆಟಗಾರನಾಗಿ ಬೆಳೆದರೆ, ಇನ್ನೊಬ್ಬ ಅಂತರರಾಷ್ಟ್ರೀಯ ವೃತ್ತಿಪರ ಗಾಲ್ಫರ್ ಅನಿರ್ಬನ್ ಲಾಹಿರಿ ಕೂಡಾ ಇಲ್ಲಿಯೇ ತರಬೇತು ಪಡೆದು ಎತ್ತರಕ್ಕೇರಿದವರು. ಏಷ್ಯಾ ಪೆಸಿಫಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್ಷಿಪ್, ಆರು ವರ್ಷಗಳ ಹಿಂದೆ ನಡೆದ ಲೇಡೀಸ್ ಯುರೋಪಿಯನ್ ಟೂರ್ ಸೇರಿದಂತೆ ಇಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ವೃತ್ತಿಪರ, ಅಮೆಚೂರ್ ಮತ್ತು ಜೂನಿಯರ್ ಟೂರ್ನಿಗಳು ನಡೆದಿವೆ. ಈಗಲ್ಟನ್ ಕ್ಲಬ್ನವರು ಅಖಿಲ ಭಾರತ ಸಿಗ್ನೇಚರ್ ಕ್ಲಬ್ ಗಾಲ್ಫ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಆ ತಂಡದಲ್ಲಿ ಅಶೋಕ್ ಕುಮಾರ್ ಆಡಿದ್ದರು.

ಅಶೋಕ್ ಕುಮಾರ್ ಅವರು ಅರವತ್ತರ ದಶಕದ ಕೊನೆಯಲ್ಲಿ ಸುರತ್ಕಲ್ನ ಕೆ.ಆರ್.ಇ.ಸಿ.ಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು, ಅಮೆರಿಕಾದ ಮಿಶಿಗನ್ನಲ್ಲಿ ಆಡಳಿತ ನಿರ್ವಹಣೆಗೆ ಸಂಬಂಧಿಸಿದ ಪದವಿ ಪಡೆದಿದ್ದಾರೆ. ಎಪ್ಪತ್ತರ ದಶಕದ ಆರಂಭದಲ್ಲಿ ಆಂಧ್ರದ ಕಡಪಾ ವಲಯದಲ್ಲಿ ಭಾರತ ಜೀವ ವಿಮಾ ನಿಗಮದಲ್ಲಿ ಒಂದು ವರ್ಷದಲ್ಲಿ ಅತ್ಯಧಿಕ ಮೊತ್ತದ ವ್ಯವಹಾರ ನಡೆಸಿದ್ದಕ್ಕೆ ಪ್ರಶಸ್ತಿ ಪಡೆದಿದ್ದರು. ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಇವರು ಎಂಬತ್ತರ ದಶಕದಲ್ಲಿ ಲಯನ್ಸ್ ಕ್ಲಬ್ನ ಜಿಲ್ಲಾ ಗವರ್ನರ್ ಆಗಿದ್ದರು.

ಇವರಿಗೆ ಪತ್ನಿ ಮತ್ತು ಪುತ್ರರಾದ ಕಿರಣ್ ಮೇದ, ಚೇತನ್ ಮೇದ ಇದ್ದಾರೆ. ಪುತ್ರರಿಬ್ಬರೂ ಈಗಲ್ಟನ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಚಿಕ್ಕರಂಗಪ್ಪ ಕಂಬನಿ: ನಾನು ಗಾಲ್ಫ್ ಆಟಗಾರನಾಗಲು ಅಶೋಕ್ ಕುಮಾರ್ ಅವರೇ ಕಾರಣ. ಅಲ್ಲಿ ನಾನೊಬ್ಬ ಬಾಲ್ಬಾಯ್ ಆಗಿದ್ದಾಗ ನನಗೆ ಅವರು ತೋರುತ್ತಿದ್ದ ಸ್ನೇಹ, ಪ್ರೀತಿ ವಿಶ್ವಾಸವನ್ನೇ ನಾನು ಅಂತರರಾಷ್ಟ್ರೀಯ ಆಟಗಾರನಾಗಿದ್ದಾಗಲೂ ತೋರುತ್ತಿದ್ದರು. ನನ್ನಂತಹ ಅಸಂಖ್ಯ ಆಟಗಾರರಿಗೆ ಅವರು ನೆರವು ನೀಡಿದ್ದಾರೆ. ಅವರನ್ನು ಕಳೆದುಕೊಂಡು ಕರ್ನಾಟಕದ ಗಾಲ್ಫ್ ಕ್ಷೇತ್ರ ಬಡವಾಗಿದೆ ಎಂದು ಅಂತರರಾಷ್ಟ್ರೀಯ ಗಾಲ್ಫ್ ಆಟಗಾರ ಚಿಕ್ಕರಂಗಪ್ಪ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.