ಮಥುರಾ (ಐಎಎನ್ಎಸ್): ದೇವರ ಹೆಸರಿನಲ್ಲಿ ಭಕ್ತರನ್ನು ಬಳಸಿಕೊಂಡು ಅಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದ ಆರೋಪವನ್ನು ಹೊತ್ತಿದ್ದ ‘ಕಾಮಿ ಸ್ವಾಮಿ’ ಭಾಗವತಾಚಾರ್ಯನನ್ನು 10 ದಿನಗಳ ನಂತರ ಸೋಮವಾರ ಬಂಧಿಸಲಾಗಿದ್ದು, ಹಲವು ಸಿ.ಡಿ ಮತ್ತು ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಈ ಪ್ರಕರಣ ಬಯಲಾದ ವೇಳೆ ದೇವಾಲಯಗಳ ಪಟ್ಟಣ ಮಥುರಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸ್ವಾಮಿಯ ಪ್ರತಿಕೃತಿಗಳನ್ನು ದಹಿಸಿ, ಆತನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು.

ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದಾನೆ ಎಂದು ಬಣ್ಣಿಸಲಾಗಿದ್ದ ಭಾಗವತಾಚಾರ್ಯ, ದೇವಾಲಯ, ಯುಮುನಾ ನದಿ ತೀರ, ಸ್ನಾನಘಟ್ಟಗಳಲ್ಲಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜೇಂದ್ರ ಎಂಬ ಮೂಲ ಹೆಸರನ್ನು ಹೊಂದಿರುವ ಸ್ವಾಮಿಯು ಖ್ಯಾತ ಪ್ರವಚನಕಾರ ಮತ್ತು ಚಿತ್ರಕಾರನಾಗಿದ್ದು, ತನ್ನ ವಿದೇಶಿ ಭಕ್ತರಿಗಾಗಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ. ವಿದೇಶಿ ಭಕ್ತರು ಈ ಚಿತ್ರಗಳನ್ನು ಕೆಲವು ವೆಬ್ಸೈಟ್ಗಳಲ್ಲಿ ಪ್ರಕಟಿಸಲು ಸ್ವಾಮಿಗೆ ನೆರವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾಮಿ ಸ್ವಾಮಿ’ಯು ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿಯಲು ಬಳಸುತ್ತಿದ್ದ ಕ್ಯಾಮೆರಾ, ಸಿ.ಡಿ.ಗಳನ್ನು ಬೃಂದಾವನದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಗಾಜಿಯಾಬಾದ್ನಲ್ಲಿರುವ ‘ಕಾಮಿ ಸ್ವಾಮಿ’ಯ ಸಂಬಂಧಿಕರ ಮನೆಯಲ್ಲೂ ಕೆಲವು ಸಿ.ಡಿ. ಮತ್ತು ಕ್ಯಾಮೆರಾ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಂಧಿತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ) ಮತ್ತು ಐಟಿ ಕಾಯ್ದೆಯ 67ಬಿ ಕಲಂ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

‘ನಾನೊಬ್ಬ ಕಲಾವಿದ. ಪತ್ನಿಯನ್ನೆ ರೂಪದರ್ಶಿಯನ್ನಾಗಿ ಮಾಡಿಕೊಂಡು ಚಿತ್ರಗಳನ್ನು ಬಿಡಿಸಿದ್ದೇನೆ. ಹಾಗೆಯೇ ಅಶ್ಲೀಲ ಚಿತ್ರಗಳು ಮತ್ತು ದೃಶ್ಯದ ತುಣುಕನ್ನು ಚಿತ್ರೀಕರಿಸಿದ್ದೇನೆ. ಇದನ್ನು ಮಾಡಿದ್ದು ನನ್ನ ವೈಯಕ್ತಿಕ ಬಳಕೆಗಾಗಿ. ಆದರೆ ನಂತರ ಅವುಗಳನ್ನು ಕಳವು ಮಾಡಿದ ಕೆಲವರು ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದಿರುವ ಭಾಗವತಾಚಾರ್ಯ ಅಲಿಯಾಸ್ ರಾಜೇಂದ್ರ, ಪೊಲೀಸರು ಹೊರಿಸಿರುವ ಎಲ್ಲಾ ಆರೋಪವನ್ನು ಅಲ್ಲಗಳೆದಿದ್ದು ಸಿ.ಡಿ.ಗಳನ್ನು ಸೃಷ್ಟಿಸಲಾಗಿದೆ ಎಂದಿದ್ದಾನೆ.
‘ನನ್ನ ಪತಿ ದುರಸ್ತಿಗೆ ನೀಡಿದ್ದ ಲ್ಯಾಪ್ಟಾಪ್ನಲ್ಲಿದ್ದ ಕೆಲವೊಂದು ದೃಶ್ಯಗಳನ್ನು ಐಟಿ ಸಂಸ್ಥೆಯೊಂದು ಬಹಿರಂಗ ಮಾಡಿದೆ’ ಎಂದು ರಾಜೇಂದ್ರನ ಪತ್ನಿ ಈ ಮೊದಲು ಪೊಲೀಸರಿಗೆ ದೂರು ನೀಡಿದ್ದಳು.

‘ಈ ದೃಶ್ಯಾವಳಿಯನ್ನು ಬಹಿರಂಗ ಮಾಡದಿರಲು ್ಙ10 ಲಕ್ಷ ನೀಡುವಂತೆ ಐಟಿ ಸಂಸ್ಥೆಯವರು ಬ್ಲಾಕ್ಮೇಲ್ ಮಾಡಿದ್ದರು’ ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ.
‘ಕೆಲವೊಂದು ದೃಶ್ಯಗಳಂತೂ ಅಸ್ವಾಭಾವಿಕವಾದ ಲೈಂಗಿಕ ಕ್ರಿಯೆಗಳಿಂದ ಕೂಡಿವೆ. ಇನ್ನು ಕೆಲವು ದೃಶ್ಯಗಳಲ್ಲಿ ಚಿಕ್ಕ ಮಕ್ಕಳು ಸಹ ಇದ್ದಾರೆ. ಹಾಗಾಗಿ ರಾಜೇಂದ್ರ ಮತ್ತು ಆತನ ಪತ್ನಿ ಇಬ್ಬರನ್ನು ಬಂಧಿಸಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜೇಂದ್ರ ಮತ್ತು ಅವನ ಕುಟುಂಬದವರು ಬಂಧನವಾಗುವುದನ್ನು ತಪ್ಪಿಸಲು ಮಥುರಾ, ಕಾನ್ಪುರ, ಗಾಜಿಯಾಬಾದ್ ನಡುವೆ ಅಡ್ಡಾಡುತ್ತಿದ್ದರು. ಆದರೆ ಬೃಂದಾವನದಲ್ಲಿರುವ ತನ್ನ ಮನೆಗೆ ರಾಜೇಂದ್ರ ಸೋಮವಾರ ಆಗಮಿಸುತ್ತಿದ್ದಂತೆಯೇ ಆತನನ್ನು ಬಂಧಿಸಲಾಯಿತು ಎಂದು ಮಥುರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕಿಶೋರ್ ವರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.