ಮಂಗಳವಾರ, ಮೇ 17, 2022
27 °C

ಅಸಭ್ಯ ವರ್ತನೆ: ಭಾರತದ ಸುನಿಲ್‌ಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಪೋ, ಮಲೇಷ್ಯಾ (ಪಿಟಿಐ): ಸುಲ್ತಾನ್ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಅಸಭ್ಯ ವರ್ತನೆ ತೋರಿದ್ದಕ್ಕೆ ಭಾರತ ತಂಡದ ಆಟಗಾರ ಎಸ್.ವಿ.ಸುನಿಲ್‌ಗೆ ಎಚ್ಚರಿಕೆ ನೀಡಲಾಗಿದೆ. ದಂಡ ಅಥವಾ ನಿಷೇಧ ಶಿಕ್ಷೆಗೆ ಒಳಗಾಗುವುದರಿಂದ ಅವರು ಪಾರಾಗಿದ್ದಾರೆ.ಗುರುವಾರ ನಡೆದ ಪಾಕ್ ವಿರುದ್ಧದ ಪಂದ್ಯದ ಬಳಿಕ ಸುನಿಲ್ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು. ಅವರು ಅನುಚಿತವಾಗಿ ವರ್ತಿಸಿದ್ದು ಟಿವಿ ರಿಪ್ಲೇಯಿಂದ ಗೊತ್ತಾಗಿದೆ. ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಸುನಿಲ್ 69ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.ಭಾರತ ತಂಡದ ಆಟಗಾರರಿದ್ದ ಹೋಟೆಲ್‌ನಲ್ಲಿ ವಿಚಾರಣೆ ನಡೆಸಿದ ಟೂರ್ನಿಯ ನಿರ್ದೇಶಕ ಹಾಂಕಾಂಗ್‌ನ ಸುರೀಂದರ್ ಧಿಲ್ಲಾನ್ ಎಚ್ಚರಿಕೆ ನೀಡುವ ತೀರ್ಮಾನ ಕೈಗೊಂಡರು. ಸುನಿಲ್ ಹಾಗೂ ಭಾರತ ತಂಡದ ಮ್ಯಾನೇಜರ್ ಮನೋಜ್ ಭೋರೆ ವಿಚಾರಣೆಯಲ್ಲಿ ಹಾಜರಿದ್ದರು. `ಸುನಿಲ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಅವರಿಗೆ ಅಧಿಕೃತವಾಗಿ ಎಚ್ಚರಿಕೆ ನೀಡಲಾಗಿದೆ~ ಎಂದು ಧಿಲ್ಲಾನ್ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.