ಅಸಾಂಜ್ ಗಡಿಪಾರು ಕೋರ್ಟ್‌ಗೆ ಬಿಟ್ಟ ವಿಷಯ

7

ಅಸಾಂಜ್ ಗಡಿಪಾರು ಕೋರ್ಟ್‌ಗೆ ಬಿಟ್ಟ ವಿಷಯ

Published:
Updated:

ಲಂಡನ್ (ಎಪಿ): ವಿಕೀಲಿಕ್ಸ್‌ನ ಸ್ಥಾಪಕ ಜೂಲಿಯಸ್ ಅಸಾಂಜ್ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ವಿಷಯದಲ್ಲಿ ತಮ್ಮ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದು, ಏಕೆಂದರೆ ಅದು ಕೋರ್ಟ್‌ಗೆ ಬಿಟ್ಟ ವಿಷಯ ಎಂದು  ಸ್ವೀಡನ್ ಪ್ರಧಾನಿ ಫ್ರೆಡ್ರಿಕ್ ರೀನ್‌ಫೆಲ್ಡ್ ಹೇಳಿದ್ದಾರೆ.ಪ್ರಸುತ್ತ ಅಸಾಂಜ್ ಲಂಡನ್‌ನಲ್ಲಿದ್ದು, ಆತನ ಮೇಲೆ ಲೈಂಗಿಕ ದೌರ್ಜನ್ಯ ಆಪಾದನೆಯೂ ಇದೆ.ಆತನನ್ನು ಸ್ವೀಡನ್‌ಗೆ ಗಡೀಪಾರು ಮಾಡಿದರೆ ಅಲ್ಲಿಂದ ಅಮೆರಿಕಕ್ಕೆ ಗಡೀಪಾರು ಮಾಡಲಾಗುತ್ತದೆ. ಒಂದು ವೇಳೆ ಅಮೆರಿಕಕ್ಕೆ ಹೋದಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆ ಇದೆ ಎಂದು ಆತನ ಪರ ವಕೀಲರು ಹಾಗೂ ಬೆಂಬಲಿಗರು ಆತಂಕ ವ್ಯಕ್ತ ಪಡಿಸಿದರು.ಈ ಆರೋಪಕ್ಕೆ ಉತ್ತರಿಸಿರುವ ಸ್ವೀಡನ್ ಪ್ರಧಾನಿ ಅಸಾಂಜ್ ವಿಷಯ ನ್ಯಾಯಾಲಯದಲ್ಲಿರುವ ಕಾರಣ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry