ಭಾನುವಾರ, ಜನವರಿ 26, 2020
31 °C

ಅಸೋಗಾದಲ್ಲಿ ಸಂಕ್ರಾಂತಿ ಪುಣ್ಯಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ತಾಲ್ಲೂಕಿನ ಪ್ರಸಿದ್ಧ ತೀರ್ಥ ಕ್ಷೇತ್ರ ಅಸೋಗಾದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜಿಲ್ಲೆಯ ಹಾಗೂ ಅಕ್ಕಪಕ್ಕದ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸಿ ಪುಣ್ಯ ನದಿ ಮಲಪ್ರಭೆಯಲ್ಲಿ ಮಿಂದು ರಾಮಲಿಂಗೇಶ್ವರನ ದರ್ಶನ ಪಡೆದರು.ಮುಂಜಾನೆಯಿಂದಲೇ ಅಸೋಗಾದ ಪುಟ್ಟ ನದಿ ತೀರ ಜನಸಾಗರದಿಂದ ತುಂಬಿಹೋಗಿತ್ತು. ಪ್ರತಿವರ್ಷ ಪಟ್ಟಣದಿಂದ ಅಸೋಗಾ ಗ್ರಾಮಕ್ಕೆ ಸಾರಿಗೆ ಸೇವೆಯನ್ನು ನೀಡುತ್ತಿದ್ದ ಕೆಎಸ್ಸಾರ್ಟಿಸಿ ಈ ವರ್ಷ ಯಾವುದೇ ವಾಹನವನ್ನು ಇತ್ತ ಬಿಡಲಿಲ್ಲ. ಅದರಿಂದ ಅನಿವಾರ‌್ಯವಾಗಿ ಜನರು ದುಬಾರಿ ಬೆಲೆ ತೆತ್ತು ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು. ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಪಾರಿಶ್ವಾಡ, ಹಂಡಿಬೆಡಗನಾಥ, ಹಬ್ಬನಹಟ್ಟಿ ಹಾಗೂ ಕಣಕುಂಬಿ ನದಿತೀರಗಳಲ್ಲೂ ಸಾವಿರಾರು ಜನರು ಪುಣ್ಯಸ್ನಾನ ಮಾಡಿದ ವರದಿಯಾಗಿದೆ.

ಪ್ರತಿಕ್ರಿಯಿಸಿ (+)