ಬಾಕ್ಸರ್ ವಿಜೇಂದ್ರ ಸಿಂಗ್ ನಾಯಕನಾಗಿರುವ ಲವ್ಲಿ ಸಿಂಗ್ ನಿರ್ದೇಶನದ ‘ಮನ್ಚಲಿ’ ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶ ಪಡೆಯಲು ಗೋವಿಂದ ಅವರ ಪುತ್ರಿ ನರ್ಮದಾ ಸಿದ್ಧಳಾಗಿದ್ದಾಳೆ. ತನ್ನ ಪ್ರೀತಿಯ ಪುತ್ರಿ ನರ್ಮದಾ ಅಹುಜಾಳ ಮೊದಲ ಚಿತ್ರದಲ್ಲಿ ತನ್ನ ಪ್ರೀತಿಯ ಗೆಳೆಯ ಸಲ್ಮಾನ್ ಖಾನ್ ನಟಿಸಬೇಕೆಂಬುದು ಗೋವಿಂದರ ಆಸೆ.

ಗೆಳೆಯನ ಆಸೆಯನ್ನು ಸಲ್ಮಾನ್ಖಾನ್ ಮನಃಪೂರ್ವಕವಾಗಿ ಅಂಗೀಕರಿಸಿದ್ದಾರೆ. ಸೋನಾಕ್ಷಿ ಸಿನ್ಹ ಜೊತೆ ‘ದಬಂಗ್’ ಚಿತ್ರದಲ್ಲಿ ನಟಿಸುವ ಮೂಲಕ ಅವಳಿಗೆ ಅದೃಷ್ಟ ತಂದಿತ್ತ ಸಲ್ಮಾನ್ ತನ್ನ ಮಗಳ ಮೊದಲ ಚಿತ್ರದಲ್ಲಿಯೂ ಕಾಣಿಸಿಕೊಂಡು ಅವಳಿಗೆ ಅದೃಷ್ಟ ಕರುಣಿಸಲಿ ಎಂಬುದು ಗೋವಿಂದ ದಂಪತಿ ಬಯಕೆ. ‘ಇದುವರೆಗೂ ಕಾದು ನರ್ಮದಾಗಾಗಿ ಹುಡುಕಿ ಆರಿಸಿದ ಕತೆ ಇದು. ಅವಳೂ ಕೂಡ ತನ್ನ ಸಾಮರ್ಥ್ಯ ತೋರಿಸಲು ಉತ್ಸುಕಳಾಗಿದ್ದಾಳೆ. ಸಲ್ಮಾನ್ ನಟಿಸಲು ಒಪ್ಪಿದ್ದಾರೆ’ ಎಂದು ಗೋವಿಂದ ಸಂತೋಷದಿಂದ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.