ಶುಕ್ರವಾರ, ಮೇ 7, 2021
24 °C

ಆಂಧ್ರ ಜವಳಿ ಖಾತೆ ಸಚಿವರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ನೇಕಾರರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಕುರಿತು ಆಂಧ್ರಪ್ರದೇಶದ ಜವಳಿ ಸಚಿವ ಡಾ.ಪಿ.ಶಂಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಜವಳಿ, ಸಣ್ಣ ಕೈಗಾರಿಕೆ, ಖಾದಿ ಮತ್ತು ಸಾರ್ವಜನಿಕ ಉದ್ದಿಮೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ರಾವ್ ಬುಧವಾರ ಭೇಟಿ ಮಾಡಿದರು.ರಾಜ್ಯದಲ್ಲಿ ಜಾರಿಗೆ ತಂದಿರುವ ಸುವರ್ಣ ವಸ್ತ್ರ ನೀತಿ, ಜವಳಿ ಪಾರ್ಕ್, ವಿದ್ಯುತ್ ಕೈಮಗ್ಗ ಮತ್ತು ಅವುಗಳಿಗೆ ನೀಡುವ ವಿದ್ಯುತ್‌ಗೆ ಸಬ್ಸಿಡಿ ಸೇರಿದಂತೆ ಇತರ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.