ಆಂಧ್ರ: ಟಿಆರ್‌ಎಸ್ ಮುಖಂಡನ ಹತ್ಯೆ

7

ಆಂಧ್ರ: ಟಿಆರ್‌ಎಸ್ ಮುಖಂಡನ ಹತ್ಯೆ

Published:
Updated:
ಆಂಧ್ರ: ಟಿಆರ್‌ಎಸ್ ಮುಖಂಡನ ಹತ್ಯೆ

ಹೈದರಾಬಾದ್(ಪಿಟಿಐ):  ಮಾಜಿ ನಕ್ಸಲ್ ನಾಯಕರೂ ಆಗಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಮುಖಂಡ ಸಾಂಬಶಿವು ನಾಯ್ಡು ಅವರನ್ನು  ಅಪರಿಚಿತ ವ್ಯಕ್ತಿಗಳು ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಲಗುಂಡಾ ಜಿಲ್ಲೆಯಲ್ಲಿ  ನಡೆದಿದೆ.

 ಶನಿವಾರ ರಾತ್ರಿ  ಪ್ರತ್ಯೇಕ ತೆಲಂಗಾಣ ಚಳವಳಿಯನ್ನು ಬೆಂಬಲಿಸಿ ನಡೆಯುತ್ತಿರುವ  ಧೂಮ್ ಧಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಂಬಾಶಿವುನಾಯ್ಡು ನಂತರ ತಮ್ಮ ಬೆಂಬಲಿಗರ ಕಾರಿನಲ್ಲಿ  ನಲಗುಂಡಾದಿಂದ ಹೈದರಾಬಾದ್‌ಗೆ  ವಾಪಸಾಗುತ್ತಿದ್ದರು. ಆಗ  ವೆಲಗುಂಡಾ ಮಂಡಲ್‌ನ ಗೊಕ್ರಮ್‌ಗ್ರಾಮದ ಸಮೀಪ ಅಪರಿಚಿತ ವ್ಯಕ್ತಿಗಳ ಗುಂಪು ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.ಸಾಂಬಾಶಿವುನಾಯ್ಡು ಅವರ ಮೂಲ ನಾಮ ಕೊನಾಪುರಿ ಇಲಯಾ ಈತ ನಕ್ಸಲ್ ಚಳವಳಿಯಲ್ಲಿ ಸಕ್ರಿಯನಾಗಿದ್ದು 2009ರಲ್ಲಿ ಪೊಲೀಸರಿಗೆ ಶರಣಾಗಿದ್ದನು. ನಂತರ 2010ರಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.  ಈ ದಾಳಿ ಹಿಂದೆ ನಕ್ಸಲರ ಕೈವಾಡ  ಇರಬಹುದು ಎಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry