ಹೈದರಾಬಾದ್ (ಐಎಎನ್ಎಸ್): ಕರ್ನೂಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿಯೇ 11 ಶಿಶುಗಳು ಮೃತಪಟ್ಟಿರುವುದರ ಬಗ್ಗೆ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಶುಕ್ರವಾರ ತನಿಖೆಗೆ ಆದೇಶಿಸಿದ್ದಾರೆ.

ಈ ಸರ್ಕಾರಿ ಆಸ್ಪತ್ರೆಯಲ್ಲಿ ಮೇಲ್ನೋಟಕ್ಕೆ ವೈದ್ಯಕೀಯ ನಿರ್ಲಕ್ಷತೆಯು ಕಂಡು ಬಂದಿದ್ದು, ಅವಶ್ಯ ಕ್ರಮಗಳನ್ನು ಕೈಗೊಳ್ಳಲು ಇಬ್ಬರು ಸಚಿವರನ್ನು ಈ ಆಸ್ಪತ್ರೆಗೆ ಕಳುಹಿಸಲಾಗಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಸರಬರಾಜು ವ್ಯವಸ್ಥೆಯಲ್ಲಿ ಕೊರೆತೆ ಕಂಡುಬಂದಿತ್ತು. ಈ ಹಿನ್ನೆಯಲ್ಲಿ ಗುರುವಾರ ಆಸ್ಪತ್ರೆಯಲ್ಲಿ ಏಳು ಶಿಶುಗಳು ಮೃತಪಟ್ಟಿವೆ. ನಂತರ ನಾಲ್ಕು ಶಿಶುಗಳು ಹಸುನೀಗಿವೆ. ಈ ಎಲ್ಲಾ ಶಿಶುಗಳು ಜನಿಸಿ ಒಂದರಿಂದ ಐದು ದಿನಗಳು ಮಾತ್ರ ಆಗಿದೆ ಎನ್ನಲಾಗಿದೆ.

ಆಮ್ಲಜನಕ ಸರಬರಾಜು ಮಾಡುವ ಕೊಳವೆ ದುಸ್ಥಿತಿಯಿಂದ ಕೂಡಿದ್ದರಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಆಸ್ಪತ್ರೆಯಲ್ಲಿ ಅಧಿಕಾರಿಗಳ ನಿರ್ಲಕ್ಷತೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

‘ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಯಲು ಪರಿಣಿತ ಅಧಿಕಾರಿಗಳ ತಂಡವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ~ ಎಂದು ಆರೋಗ್ಯ ಸಚಿವ ಡಿ.ಎಲ್. ರವೀಂದ್ರ ರೆಡ್ಡಿ ಅವರು ತಿಳಿಸಿದ್ದಾರೆ.

ಈ ಅಚಾತುರ್ಯಕ್ಕೆ ವೈದ್ಯಕೀಯ ನಿರ್ಲಕ್ಷತೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.