ಶನಿವಾರ, ಫೆಬ್ರವರಿ 27, 2021
31 °C
ಭಾರತದ ಪ್ರತಿರೋಧದ ನಡುವೆಯೂ ಗಿಲ್ಗಿಟ್‌ ಬಾಲ್ತಿಸ್ತಾನದಲ್ಲಿ ಚುನಾವಣೆ

ಆಕ್ರಮಿತ ಪ್ರದೇಶದಲ್ಲಿ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ರಮಿತ ಪ್ರದೇಶದಲ್ಲಿ ಮತದಾನ

ಇಸ್ಲಾಮಾಬಾದ್‌ (ಪಿಟಿಐ): ಭಾರತದ ಆಕ್ಷೇಪದ ಹೊರತಾಗಿಯೂ ಗಿಲ್ಗಿಟ್‌ ಬಾಲ್ತಿಸ್ತಾನದಲ್ಲಿ ವಿಧಾನಸಭೆ ಚುನಾವಣೆಯನ್ನು ಪಾಕಿಸ್ತಾನ ಸೋಮವಾರ ನಡೆಸಿದೆ. 2009ರಲ್ಲಿ ಈ ಪ್ರದೇಶದ ಹೆಸರನ್ನು ಗಿಲ್ಗಿಟ್‌ ಬಾಲ್ತಿಸ್ತಾನದ ಬದಲಿಗೆ ಉತ್ತರ ಪ್ರದೇಶ ಎಂದು ಮರುನಾಮಕರಣ ಮಾಡಲಾಗಿದೆ. ಆ ನಂತರ ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಸುವ ಎರಡನೇ ಪ್ರಯತ್ನ ಇದು.ಗಿಲ್ಗಿಟ್‌ ಬಾಲ್ತಿಸ್ತಾನದಲ್ಲಿ ಚುನಾವಣೆ ನಡೆಸುವ ಪಾಕಿಸ್ತಾನದ ಪ್ರಯತ್ನವನ್ನು ಕಳೆದ ವಾರ ಭಾರತ ಬಲವಾಗಿ ಖಂಡಿ ಸಿತ್ತು. ಇದು ಕಾನೂನುಬಾಹಿರ ಮತ್ತು ಬಲವಂತವಾಗಿ ಈ ಪ್ರದೇಶವನ್ನು ಕೈವಶ ಇರಿಸಿಕೊಂಡಿರುವುದನ್ನು ಮರೆ ಮಾಚುವ ಯತ್ನ. ಈ ಭಾಗ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿತ್ತು. ಈ ಪ್ರದೇಶದ ಜನರಿಗೆ ಅವರ ರಾಜಕೀಯ ಹಕ್ಕುಗಳನ್ನು ನಿರಾಕರಿಸುವ ಪಾಕಿಸ್ತಾನದ ಪ್ರಯತ್ನದ ಮುಂದುವರಿದ ಭಾಗ ಇದು ಎಂದು ವಿದೇಶಾಂಗ ವ್ಯವ ಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ನವದೆಹಲಿಯಲ್ಲಿ ಹೇಳಿದ್ದರು. ಪಾಕಿಸ್ತಾನದ ಆಂತರಿಕ ವ್ಯವ ಹಾರಗಳಲ್ಲಿ ಭಾರತ ತಲೆ ಹಾಕುವುದನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನ ಹೇಳಿತ್ತು. ಸೋಮವಾರ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಿದೆ. ನಂತರ ಮತ ಎಣಿಕೆಯೂ ಆರಂಭವಾಗಿದೆ.  ಪಾಕಿಸ್ತಾನ ಚುನಾವಣಾ ಆಯೋಗದ ಪ್ರಕಾರ ಇಲ್ಲಿ 6.18 ಲಕ್ಷ ಮತ ದಾರರಿದ್ದಾರೆ. 1,143 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರ ಪಿಎಂಎಲ್‌ ಎನ್‌, ಇಮ್ರಾನ್‌ ಖಾನ್‌ ನೇತೃತ್ವದ ತೆಹ್ರಿಕ್‌ ಎ ಇನ್ಸಾಫ್‌ ಮತ್ತು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಸೇರಿ ಎಲ್ಲ ಪ್ರಮುಖ ಪಕ್ಷಗಳ 272 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಗಿಲ್ಗಿಟ್‌ ಬಾಲ್ತಿಸ್ತಾನದ ಮೂಲಕ ಮಾತ್ರ ಪಾಕಿಸ್ತಾನಕ್ಕೆ ಚೀನಾದೊಂದಿಗೆ ಭೂ ಸಂಪರ್ಕ ಇದೆ. 4,600 ಕೋಟಿ (ಸುಮಾರು ₨3 ಲಕ್ಷ ಕೋಟಿ) ಡಾಲರ್‌ ಹೂಡಿಕೆಯ ಚೀನಾ-ಪಾಕಿಸ್ತಾನ ಆರ್ಥಿಕ  ವಲಯ ಕೂಡ ಈ ಪ್ರದೇಶದಲ್ಲಿಯೇ ಹಾದು ಹೋಗುತ್ತದೆ. ಈ ಯೋಜನೆಗೆ ಕೂಡ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

*

ಅಂಕಿ ಅಂಶ

6.18 ಲಕ್ಷ ಮತದಾರರು

24 ಕ್ಷೇತ್ರಗಳು

1,143 ಮತಗಟ್ಟೆಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.