ಮೈಸೂರು: ಮನು, ಲಾರ್ಡ್ ಮೆಕಾಲೆ ಮತ್ತು ಪ್ರಧಾನ ಮಂತ್ರಿ ಡಾ. ಮನಮೋಹನ್ಸಿಂಗ್ ಮೂವರು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿನಿಂದ ಈಗಿನವರೆಗೂ ಶ್ರೇಣಿಕೃತ ವ್ಯವಸ್ಥೆಯ ಪ್ರತಿಪಾದಕರಾಗಿದ್ದಾರೆ. ಈ ಮೂವರು ಅಸಮಾನ ಶಿಕ್ಷಣವನ್ನು ಅನುಸರಿಸಿದವರು ಎಂದು ದೆಹಲಿ ವಿಶ್ವವಿದ್ಯಾ ಲಯದ ಶಿಕ್ಷಣ ವಿಭಾಗದ ಮಾಜಿ ಮುಖ್ಯಸ್ಥ, ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ಸಮಿತಿಯ ಅಧ್ಯಕ್ಷೀಯ ಮಂಡಳಿ ಸದಸ್ಯ ಪ್ರೊ. ಅನಿಲ್ ಸದ್ಗೋಪಾಲ್ ಹೇಳಿದರು.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಆಶ್ರಯದಲ್ಲಿ ಸೋಮವಾರ ಧ್ವನ್ಯಾಲೋಕದಲ್ಲಿ ಆಯೋಜಿಸಲಾಗಿದ್ದ ಶಿಕ್ಷಣ ತಜ್ಞರ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮಹಿಳೆಯರು, ಅಂಗವಿಕಲರು ಮತ್ತು ದುರ್ಬಲರನ್ನು ಸಮಾಜದಲ್ಲಿ ಕೀಳಾಗಿ ನೋಡುವಂತಹ ವಾದವನ್ನು ಮನು ಪ್ರತಿಪಾದಿಸಿದ್ದ. ಸಮಾಜದಲ್ಲಿ ವರ್ಣಾಶ್ರಮ, ಶ್ರೇಣಿಕೃತ ವ್ಯವಸ್ಥೆ ಬೆಳೆದವು. ಆದರೆ ಮುಂದೆ ಬುದ್ಧ, ಜೈನ್.

ಲೋಕಾಯತ ಧರ್ಮಗಳು ಸಮಾನತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾ ದಿಸಿದ್ದು ಆಶಾಕಿರಣವಾದವು. ಆದರೆ ಇಂದಿಗೂ ವರ್ಣಾಶ್ರಮ, ಊಳಿಗಮಾನ್ಯ ಮನಸ್ಥಿತಿಗಳು ಇವೆ~ ಎಂದು ವಿಷಾದಿಸಿದರು.

`ಅದೇ ರೀತಿ 1835ರಲ್ಲಿ ಮೆಕಾಲೆ ರೂಪಿಸಿದ ಶಿಕ್ಷಣ ನೀತಿಯು ಕೂಡ ಭಾರತದ ಕೆಳವರ್ಗದವರನ್ನು ಸ್ಥಳೀಯ ಮೂಲನಿವಾಸಿಗಳನ್ನು ದಮನ ಮಾಡುವುದೇ ಆಗಿದೆ. ಆತ ರಚಿಸಿದ ಮೆಕಾಲೆ ಮಿನಿಟ್ಸ್ ಅನ್ನು ಎಲ್ಲರೂ ಓದಬೇಕು. ಅವನು ಬರೆದ ಸಾಲುಗಳ ನಡುವಿನ ಅರ್ಥವನ್ನು ತಿಳಿದುಕೊಳ್ಳಬೇಕು. ಆಗ ಮೂರು ಮುಖ್ಯ ಅಂಶಗಳು ಅರ್ಥ ವಾಗುತ್ತವೆ. ಮೊದಲನೆಯದಾಗಿ ಭಾರತೀಯ ಭಾಷೆಗಳು ಜ್ಞಾನಾರ್ಜನೆ ಮತ್ತು ಅಭಿವ್ಯಕ್ತಿಯ ಸತ್ವ ಕಳೆದುಕೊಂಡಿವೆ ಎಂದು ಹೇಳಿದ್ದಾನೆ.

ಎರಡನೇಯದಾಗಿ ಎಲ್ಲರಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಲು ಸಂಪನ್ಮೂಲ ಕೊರತೆಯಿದೆ. ಆದ್ದರಿಂದ ಸಮಾಜದ ಮೇಲ್ಜಾತಿಯ ಮತ್ತು ಮೇಲ್ವರ್ಗಗಳ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಣ ನೀಡಬೇಕು. ಮೂರನೇಯ ದಾಗಿ ಮೇಲ್ವರ್ಗದವರಿಗೆ ಬ್ರಿಟಿಷ್ ಪದ್ಧತಿಯ ಶಿಕ್ಷಣ ನೀಡುವ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ಮಧ್ಯವರ್ತಿಗಳನ್ನಾಗಿ ಮಾಡಿಕೊಳ್ಳಬೇಕು.

ಆ ಮೂಲಕ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದ್ದ. ಆದೇ ರೀತಿ ಇಂದು ಆಗುತ್ತಿದೆ. ಭಾರತವು ಇವತ್ತು ಜಾಗತಿಕ ಮಾರುಕಟ್ಟೆಯ ದಲ್ಲಾಳಿಯಾಗಿದೆ. ದುಡಿಯುವ ಕಾರ್ಮಿಕರನ್ನು ತಯಾರು ಮಾಡಿ ವಿದೇಶಗಳಿಗೆ ನೀಡುವ ತಾಣವಾಗಿದ್ದು, ಅವರೆಲ್ಲ ನಮ್ಮವರ ಶ್ರಮದ ಬೆವರಿನಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ~ ಎಂದು ತುಲನೆ ಮಾಡಿ ಹೇಳಿದರು.

`1842ರಲ್ಲಿ ಮಹಾತ್ಮ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿ ಪುಲೆಯವರು ಬಡಮಕ್ಕಳಿಗೆ ಮೋಡಿ ಭಾಷೆಯ ಶಾಲೆ ಆರಂಭಿಸಿದರು. ಮೆಕಾಲೆಯ ಶಿಕ್ಷಣ ಪದ್ಧತಿ ವಿರೋಧಿಸಿದರು. ಅವರು 1882ರಲ್ಲಿ ಹಂಟರ್ ಕಮಿಷನ್ ಮುಂದೆ ಸಲ್ಲಿಸಿದ ವರದಿಯಲ್ಲಿ, ನಮ್ಮ ಶ್ರಮಿಕರ ಬೆವರಿನಿಂದ ಗಳಿಸಿದ ಹಣವನ್ನು ಮೇಲ್ವರ್ಗದ ಜನರಿಗೆ ಮಾತ್ರ ಕೊಡುತ್ತಿರುವುದು ಅನ್ಯಾಯ, ಶ್ರಮ ಸಾಂಸ್ಕೃತಿಯಿಲ್ಲದವರಿಗೆ ನೀವು ಶಿಕ್ಷಣ ಕೊಡುತ್ತಿದ್ದು, ಅವರು ಮುಂದೆ ಶಿಕ್ಷಣ ನೀಡುವ ಮಕ್ಕಳು ಸೋಮಾರಿ ಸಂಸ್ಕೃತಿ ಯನ್ನೆ ರೂಢಿಸುತ್ತಾರೆ.

ಪ್ರಾಥಮಿಕ ಶಿಕ್ಷಣ ಮಾತ್ರವಲ್ಲ ಉನ್ನತ ಶಿಕ್ಷಣವನ್ನು ದೇಶದ ಸಾಂಸ್ಕೃತಿಕ, ಆರ್ಥಿಕ ವೈವಿಧ್ಯತೆಗಳಿಗೆ ತಕ್ಕಂತೆ ನೀಡಬೇಕು~ ಎಂದು ಪ್ರತಿಪಾದಿಸಿದ್ದರು.

`ಅದೇ ಸಂದರ್ಭದಲ್ಲಿ ದಾದಾಭಾಯಿ ನವರೋಜಿ ಯವರೂ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಬೇಕು. ಇಲ್ಲದಿದ್ದರೆ ಬಡತನ ನಿರ್ಮೂಲನೆ ಅಸಾಧ್ಯ ಎಂದು ಹೇಳಿದ್ದರು. 1911ರಲ್ಲಿ ಇಂಪಿರಿಯಲ್ ಸಂಸತ್ ಮುಂದೆ ಗೋಪಾಲಕೃಷ್ಣ ಗೋಖಲೆಯವರು ಮಂಡಿಸಿದ್ದ ಶಿಕ್ಷಣ ನೀತಿಯೂ ಇದನ್ನೇ ಪ್ರತಿಪಾದಿಸಿತ್ತು.

ಆದರೆ ಆಗ ಬ್ರಿಟಿಷ್ ಸರ್ಕಾರ ಅದನ್ನು ಮೌನವಾಗಿ ಒಪ್ಪಿಕೊಂಡಿತ್ತು. ಆದರೆ ನಮ್ಮದೇ ದೇಶದ ಪಾಳೆಯಗಾರ ಶಕ್ತಿಗಳು, ಸಾಮಂತ ರಾಜರು ಮತ್ತು ಅದಾಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊಸ ಬಂಡವಾಳಶಾಹಿಗಳು ವಿರೋಧ ವ್ಯಕ್ತಪಡಿಸಿದ್ದರು.

ಅದರಲ್ಲೂ ಬಿಹಾರದ ದರ್ಭಂಗಾ ಸಂಸ್ಥಾನದ ಮಹಾರಾಜ ಎಲ್ಲ ಸಾಮಂತರ ಸಹಿ ಪಡೆದ ಪತ್ರದಲ್ಲಿ, ಬಡವರು, ಮಕ್ಕಳು ಶಿಕ್ಷಣ ಪಡೆದರೆ ನಮ್ಮ ಹೊಲಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದ. ಆ ಮೂಲಕ ಸತ್ಯವನ್ನು ಒಪ್ಪಿಕೊಂಡಿದ್ದರು. ಆದರೆ ಇಂದು ಸರ್ಕಾರಗಳು, ಬಂಡವಾಳಶಾಹಿಗಳು, ಶಿಕ್ಷಣ ಸಂಸ್ಥೆಗಳು ಅಂತಹ ಸತ್ಯವನ್ನೂ ಒಪ್ಪಿಕೊಳ್ಳುತ್ತಿಲ್ಲ~ ಎಂದು ವ್ಯಂಗ್ಯವಾಡಿದರು.

`ಕೊಲ್ಲಾಪುರದ ಶಾಹು ಮಹಾರಾಜರು, ಮೈಸೂರಿನ ಮಹಾರಾಜರು, ಬರೋಡಾ ಮಹಾರಾಜರು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ತಮ್ಮ ಸಂಸ್ಥಾನದಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದರು. ಇತ್ತೀಚಿನ ಸಂಶೋಧನೆಯಲ್ಲಿ ತಿಳಿದಂತೆ, ಮಧ್ಯಪ್ರದೇಶದ ಮೂವರು ಬೇಗಂಗಳು ಈ ಕಾರ್ಯವನ್ನೂ ಆಗಲೇ ಮಾಡಿದ್ದರು. ಅಂತಹ ಸಣ್ಣ ರಾಜ್ಯಗಳು ಮಾಡಿದ್ದ ಕೆಲಸವನ್ನು ಇಂದು ದೊಡ್ಡ ಸರ್ಕಾರಗಳು ಮಾಡಲು ಹಿಂಜರಿಯುತ್ತಿವೆ~ ಎಂದು ವಿಷಾದಿಸಿದರು.

`ಅಂದು ಮೇಕಾಲೆ ಹೇಳಿದ್ದ ಸಂಪನ್ಮೂಲ ಕ್ರೂಡೀಕರಣ ಸಮಸ್ಯೆಯನ್ನು ಇಂದು ಪ್ರಧಾನಿಗಳು ಪುನರುಚ್ಚರಿಸುತ್ತಿದ್ದಾರೆ. ಆ ಮೂಲಕ ಶ್ರೇಣಿಕೃತ ವ್ಯವಸ್ಥೆಯ ಶಿಕ್ಷಣಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಮನುವಾದಿಂದ ಮನಮೋಹನ್ ಸಿಂಗ್ವರೆಗೆ ಇದೇ ಹಗ್ಗಜಗ್ಗಾಟ ಮುಂದುವರೆದಿದೆ~ ಎಂದರು.

ಆಂಧ್ರಪ್ರದೇಶ ಶಿಕ್ಷಣ ಉಳಿಸಿ ಹೋರಾಟ ಸಮಿತಿ ನಾಯಕ ರಮೇಶ್ ಪಟ್ನಾಯಕ್, ಸಾಮಾಜಿಕ ಮಾನವಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಕಾನೂನು ಶಾಲೆಯ ಡಾ.ವಿ.ಪಿ.ನಿರಂಜನಾರಾಧ್ಯ, ಜನಾಂದೋಲನದ ವಾಸು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.