ಮಂಗಳವಾರ, ಜನವರಿ 28, 2020
17 °C

ಆಟೊ ಕನಿಷ್ಠ ದರ ರೂ 25ಕ್ಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಡಿ.20ರಿಂದ ಆಟೊ ದರ ಹೆಚ್ಚಳವಾಗಲಿದೆ. ಮೊದಲ 1.8 ಕಿ.ಮೀಗೆ (ಕನಿಷ್ಠ) ರೂ25 ಹಾಗೂ ನಂತರದ ಪ್ರತಿ ಕಿ.ಮೀಗೆ ರೂ13 ದರ ಏರಿಕೆಯಾಗಲಿದೆ.ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಜಿಲ್ಲಾಧಿಕಾರಿ ಜಿ.ಸಿ.ಪ್ರಕಾಶ್‌ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂ ಡಿದ್ದ ಆಟೊ ಚಾಲಕರ ಒಕ್ಕೂಟದ ಸದಸ್ಯರು ಪರಿಷ್ಕೃತ ದರಕ್ಕೆ ಸಮ್ಮತಿ ಸೂಚಿಸಿದರು. ‘ಈವರೆಗೆ ಪ್ರತಿ 1.8 ಕಿ.ಮೀಗೆ (ಕನಿಷ್ಠ) ರೂ20 ಹಾಗೂ ನಂತರದ ಪ್ರತಿ ಕಿ.ಮೀಗೆ ರೂ11 ದರ ಇತ್ತು. ದರ ಏರಿಕೆ ಮಾಡುವಂತೆ ಆಟೊ ಚಾಲಕರು ಬೇಡಿಕೆ ಇಟ್ಟಿದ್ದರು.4 ತಿಂಗಳ ಹಿಂದೆ ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪಶ್ಚಿಮ ಸಂಚಾರ ವಿಭಾ ಗದ ಡಿಸಿಪಿ ಅವರನ್ನು ಒಳಗೊಂಡ ದರ ಪರಿಷ್ಕರಣಾ ಸಮಿತಿ ಯನ್ನು ನೇಮಿಸಲಾಗಿತ್ತು. ಈ ಸಮಿತಿ ನೀಡಿರುವ ವರದಿಯಂತೆ ದರ ಹೆಚ್ಚ ಳಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿ ದೆ’ ಎಂದು ಜಿ.ಸಿ.ಪ್ರಕಾಶ್‌ ತಿಳಿಸಿದರು.20ರಿಂದ ಆಟೊ ದರ ಹೆಚ್ಚಳ

‘ಕನಿಷ್ಠ ರೂ30 ಹಾಗೂ ನಂತರದ ಪ್ರತಿ ಕಿ.ಮೀಗೆ ರೂ15 ದರ ಹೆಚ್ಚಳ ಮಾಡಬೇಕು ಎಂಬುದು ಆಟೊ ಚಾಲಕರ ಬೇಡಿಕೆ­ಯಾಗಿತ್ತು. ಆದರೆ, ಈ ಪ್ರಮಾಣದ ದರ ಹೆಚ್ಚಳದಿಂದ ಸಾರ್ವಜನಿಕರಿಗೆ ಹೊರೆ­ಯಾಗುತ್ತದೆ ಎಂಬ ಕಾರಣಕ್ಕೆ ಈ ಬೇಡಿಕೆಯನ್ನು ಕೈ ಬಿಡಲಾಯಿತು’ ಎಂದು ಅವರು ಹೇಳಿದರು.‘ಎರಡು ವರ್ಷಗಳಿಂದ ಆಟೊ ದರ ಪರಿಷ್ಕರಣೆ­ಯಾಗಿರಲಿಲ್ಲ. ಈಗಿನ ಪರಿಷ್ಕೃತ ದರಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸ­ಲಾಯಿತು. ಪರಿಷ್ಕೃತ ದರದಿಂದ ಆಟೊ ಚಾಲಕರಿಗೆ ಸ್ವಲ್ಪಮಟ್ಟಿಗೆ  ಸಂತಸವಾಗಿದೆ’ ಎಂದು ಆಟೊ ಚಾಲಕರ ಒಕ್ಕೂಟದ ಕಾರ್ಯದರ್ಶಿ ನಾಗರಾಜು ತಿಳಿಸಿದರು.

 

ಪ್ರತಿಕ್ರಿಯಿಸಿ (+)