ಬೀದರ್: ಆಟೋ ಚಾಲಕರ ಕ್ಷೇಮಾಭಿವೃದ್ಧಿ ಮಂಡಳಿ ರಚಿಸುವಂತೆ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ನಿಂದ ನಗರದಲ್ಲಿ ಮಂಗಳವಾರ ಆಟೋಗಳೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

ನಗರದ ಬೌದ್ಧ ವಿಹಾರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಆಟೋರಿಕ್ಷಾಗಳಿಂದ ಸರ್ಕಾರಕ್ಕೆ ಆದಾಯ ಇದೆ. ಆದರೆ, ಆಟೋ ಚಾಲಕರು ಮಾತ್ರ ಯಾವುದೇ ರೀತಿಯ ಭದ್ರತೆ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ.

ಆಟೋ ಚಾಲಕರ ಕ್ಷೇಮಾಭಿವೃದ್ಧಿಗಾಗಿ ಮಂಡಳಿಯೊಂದನ್ನು ರಚಿಸಬೇಕು. ಚಾಲಕರ ಕುಟುಂಬಕ್ಕೆ ಆರೋಗ್ಯ, ಮಕ್ಕಳ ಶಿಕ್ಷಣಕ್ಕೆ ನೆರವು, ಮನೆ, ಬಿ.ಪಿ.ಎಲ್. ಕಾರ್ಡ್, ನಿವೃತ್ತಿ ವೇತನ ಮತ್ತಿತರ ಸೌಕರ್ಯಗಳನ್ನು ಇದರ ಮೂಲಕ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಪರಿವಾರಕ್ಕೆ 1 ಲಕ್ಷ ರೂಪಾಯಿ, ಸಹಜ ಸಾವಿಗೆ 50 ಸಾವಿರ ರೂಪಾಯಿ ಪರಿಹಾರ ಒದಗಿಸಬೇಕು. ಚಾಲಕರಿಗೆ ಗುರುತಿನ ಚೀಟಿ ನೀಡಬೇಕು.

ರಾಜ್ಯಾದ್ಯಂತ ಆಟೋ ಕಾಲೋನಿ ಸ್ಥಾಪಿಸಬೇಕು. ವಾಹನ ಚಾಲನಾ ಪತ್ರಕ್ಕಾಗಿ ವಿದ್ಯಾರ್ಹತೆ ಕಡ್ಡಾಯಗೊಳಿಸಬಾರದು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹೊಸ ವಾಹನ ಅಥವಾ ಹಳೆಯ ವಾಹನಕ್ಕೆ ಸಾಲ ಕಲ್ಪಿಸಬೇಕು. ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮಿತಿಯ ಜಿಲ್ಲಾ ಸಂಚಾಲಕ ಆರ್.ಪಿ. ರಾಜಾ. ಸಹ ಸಂಚಾಲಕರಾದ ಎಂ.ಡಿ. ಮೈನೊದ್ದೀನ್, ರಾಘವೇಂದ್ರ ದುಬಲಗುಂಡಿಕರ್, ರೇಷ್ಮಾ ಹಂಸರಾಜ, ಕಲಾವತಿ ಕಾಡವಾದ, ಉಮೇಶ ಆರ್ಯ, ದಶರಥ ಅರಕಿ, ಇಸಾಮೊದ್ದೀನ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.