ಗುರುವಾರ , ಮೇ 26, 2022
31 °C

ಆಡಳಿತ ಮಂಡಳಿ ಅಮಾನತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ತಾಲ್ಲೂಕು ಟಿ.ಎ.ಪಿ.ಸಿ.ಎಂ. ಎಸ್.ನಲ್ಲಿ ನಡೆದಿರುವ ರೇಷನ್ ಹಗರಣದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಿ ಆಡಳಿತ ಮಂಡಳಿಯನ್ನು ಅಮಾ ನತು ಪಡಿಸಬೇಕೆಂದು ಒತ್ತಾ ಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕ ಸೋಮ ವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.ಪಟ್ಟಣದ ಪುರಸಭೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ಶಾಲೆ, ನ್ಯಾಯಬೆಲೆ ಅಂಗಡಿ ಇತರೆ ಭಾಗ ಗಳಿಗೆ ವಿತರಿಸಲು ತಾಲ್ಲೂಕು ಟಿ.ಎ.ಪಿ. ಸಿ.ಎಂ.ಎಸ್‌ಗೆ ಬಂದ ಅಕ್ಕಿ ವಿತರಣೆ ಯಲ್ಲಿ ಲೋಪವಾಗಿದ್ದು, 616 ಕ್ವಿಂಟಲ್ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಸೊಸೈಟಿ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ತಾಲ್ಲೂಕಿನ ಸಾವಿರಾರು ಜನರಿಗೆ ತಲುಪುವ ಬದಲು ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಹೆಬ್ಬೆಟ್ಟು ಗುರುತು ನೀಡಿಲ್ಲವೆಂದು ರೇಷನ್ ನಿಲ್ಲಿಸಿರುವ ಭಾವಚಿತ್ರ ಇರುವ ಪಡಿತರ ಕಾರ್ಡುದಾರರಿಗೆ ಹೊಂದಿದ ಫಲಾನುಭವಿಗಳಿಗೆ ತಕ್ಷಣ ರೇಷನ್ ವಿತರಿಸಬೇಕು, ರೇಷನ್ ಕಾರ್ಡ್ ಮತ್ತು ರೇಷನ್ ವಿತರಣೆ ಯಲ್ಲಿ ಗೊಂದಲಕ್ಕೆ ಕಾರಣರಾದ ಕೊಮೊಟೊ ಕಂಪೆನಿ ಮೇಲೆ ಕ್ರಿಮಿ ನಲ್ ಮೊಕದ್ದಮೆ ದಾಖಲಿಸ ಬೇಕು ಹಾಗೂ ಇತರೆ ಬೇಡಿಕೆಗಳ ನ್ನುಳ್ಳ ಮನವಿ ಪತ್ರವನ್ನು ತಹಶೀ ಲ್ದಾರ್ ಅವರಿಗೆ ಸಲ್ಲಿಸಿದರು.ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟ ಮಾದು, ತಾಲ್ಲೂಕು ಅಧ್ಯಕ್ಷ ಬಿ.ಎಂ. ಶಿವಮಲ್ಲಯ್ಯ,ಸರೋಜಮ್ಮ,ಕೆ. ಎಚ್. ಪುಟ್ಟಮಾದೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾಯಣ್ಣ, ಪುರ ಸಭೆ ಸದಸ್ಯ ಬಸವರಾಜು, ಮಹ ದೇವಮ್ಮ ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.