ಆದರ್ಶ ವಸತಿ ಸೊಸೈಟಿ ಹಗರಣ ಹೈಕೋರ್ಟ್ ತರಾಟೆ

7

ಆದರ್ಶ ವಸತಿ ಸೊಸೈಟಿ ಹಗರಣ ಹೈಕೋರ್ಟ್ ತರಾಟೆ

Published:
Updated:

ಮುಂಬೈ (ಪಿಟಿಐ): ಆದರ್ಶ ವಸತಿ ಸೊಸೈಟಿ ಹಗರಣದ ಪ್ರಾಥಮಿಕ ತನಿಖೆಯನ್ನು ಮಂದಗತಿಯಲ್ಲಿ ನಡೆಸುತ್ತಿರುವ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈ ಕೋರ್ಟ್, ಶೀಘ್ರ ತನಿಖೆ ಪೂರ್ಣಗೊಳಿಸಿ ಎರಡು ವಾರದೊಳಗೆ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ತಾಕೀತು ಮಾಡಿದೆ.

ಎರಡು ವಾರಗಳ ತರುವಾಯ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸಿಬಿಐನ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಹೈ ಕೋರ್ಟ್ ಸಮನ್ಸ್ ಕೂಡ ಮಂಗಳವಾರ ಜಾರಿ ಮಾಡಿದೆ. ‘ಈ ಹಗರಣದ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿ ಎರಡು ತಿಂಗಳ ಮೇಲಾಗಿದೆ. ಆದರೂ ಯಾಕೆ ಎಫ್‌ಐಆರ್ ದಾಖಲಿಸಿಲ್ಲ?’ ಎಂದು ಹೈ ಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಬಿ.ಎಚ್. ಮರ್ಲಪಲ್ಲೆ ಮತ್ತು ಯು.ಡಿ. ಸಾಳ್ವಿ ಪ್ರಶ್ನಿಸಿದ್ದಾರೆ.

ಎಸಿಬಿ ತನಿಖೆ ಬಗ್ಗೆ ಶಂಕೆ: ಹಗರಣ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪರಿಸರ ಹೋರಾಟಗಾರ ಸಿಮ್‌ಪ್ರೀತ್ ಸಿಂಗ್, ಈ ಹಗರಣದ ವಿಚಾರಣೆಯನ್ನು ಸಿಬಿಐ ಮತ್ತು ರಾಜ್ಯದ ಭ್ರಷ್ಟಾಚಾರ ತಡೆ ಸಂಸ್ಥೆ (ಎಸಿಬಿ) ನಡೆಸುತ್ತಿವೆ. ಇವುಗಳ ನಡುವೆ ಇತಿಮಿತಿಯ ವಿವಾದವಿದ್ದು, ಅದು ತನಿಖೆಯನ್ನೇ ದಾರಿತಪ್ಪಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry