ಚಾಮರಾಜನಗರ: ‘ತಾಲ್ಲೂಕಿನಲ್ಲಿ ಕೆಲವು ಅಂಗನವಾಡಿ ಕೇಂದ್ರಗಳು ನಿಗದಿತ ವೇಳೆಯಲ್ಲಿ ನಡೆಯುತ್ತಿಲ್ಲ. ಲೋಪದೋಷ ಸರಿಪಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಅಧಿಕಾರಿಗಳು ಒತ್ತು ನೀಡ ಬೇಕು’ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ಕೃಷ್ಣರಾಜು ಸೂಚಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಆಯ್ಕೆ ನಂತರ ಪ್ರಥಮ ಬಾರಿಗೆ ನಡೆದ ತಾಲ್ಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರವಿರುವ ಗ್ರಾಮದವರಿಗೆ ಕಾರ್ಯಕರ್ತೆಯರ ಹುದ್ದೆ ನೀಡ ಬೇಕಿದೆ. ಇದು ಸರ್ಕಾರದ ನಿಯಮ. ಆದರೆ, ತಾಲ್ಲೂಕಿನ ಕೆಲವೆಡೆ ಬೇರೆ ಗ್ರಾಮದಲ್ಲಿ ವಾಸಿಸುವ ಕಾರ್ಯ ಕರ್ತೆಯರನ್ನು ನೇಮಿಸಲಾಗಿದೆ. ಇದರ ಪರಿಣಾಮ ಕೇಂದ್ರ ತೆರೆ ಯಲು ತೊಂದರೆಯಾಗುತ್ತಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಎಂದರು.

ಈಗಾಗಲೇ, ಗ್ರಾಮ ಸಭೆ ನಡೆದಿರುವ ಊರುಗಳಿಗೆ ಪ್ರಾಧಾನ್ಯ ನೀಡಬಾರದು. ಗ್ರಾ.ಪಂ. ವ್ಯಾಪ್ತಿ ಯಲ್ಲಿರುವ ಇತರೇ ಗ್ರಾಮಗಳಲ್ಲಿ ಸಭೆ ನಡೆಸಬೇಕು. ಅರ್ಹ ಫಲಾ ನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು.

ನಿವೇಶನದ ಕೊರತೆ
ನಂಜುಂಡಪ್ಪ ವರದಿಯನ್ವಯ ಶಾಲಾ ಕೊಠಡಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಹೆಗ್ಗೋಠಾರ ಗ್ರಾಮಕ್ಕೆ 8 ಕೊಠಡಿ ಮಂಜೂರಾ ಗಿವೆ. ಆದರೆ, ಅಲ್ಲಿ ಯಾವುದೇ ಸರ್ಕಾರಿ ಜಮೀನು ಇಲ್ಲ. ಹೀಗಾಗಿ, ಕೊಠಡಿ ನಿರ್ಮಾಣಕ್ಕೆ ಸಮಸ್ಯೆ ಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ. ಉದಯಕುಮಾರ್ ಸಭೆಗೆ ತಿಳಿಸಿದರು.

ಜತೆಗೆ, ಆದರ್ಶ ಶಾಲೆ ನಿರ್ಮಾ ಣಕ್ಕೆ 3 ಕೋಟಿ ರೂ ಮಂಜೂ ರಾಗಿದೆ. ಇದಕ್ಕೂ ಜಮೀನಿನ ಸಮಸ್ಯೆ ಎದುರಾಗಿದೆ. ಉತ್ತವಳ್ಳಿ ಬಳಿ ಗ್ರಾ.ಪಂ.ಗೆ ಸೇರಿದ ಜಮೀನಿದೆ. ಸ್ಥಳಾವಕಾಶ ಕಲ್ಪಿಸಿದರೆ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ರಾಜು, ‘ಗ್ರಾ.ಪಂ. ವ್ಯಾಪ್ತಿ ಜಮೀನಿದ್ದರೆ ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಅಡ್ಡಿಯಿಲ್ಲ. ಈ ಕುರಿತು ಬುಧವಾರ ಸ್ಥಳ ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದರು.
ಮಲೆಯೂರು ಸೇರಿದಂತೆ ಕೆಲವು ಗ್ರಾಮದ ಶಾಲೆಗಳಲ್ಲಿ ಶೌಚಾಲ ಯವಿದ್ದರೂ ನಿರ್ವಹಣೆ ಸಮರ್ಪಕ ವಾಗಿಲ್ಲ. ಎಲ್ಲಾ ಶಾಲೆಗಳಲ್ಲೂ ಇಂಥ ಸಮಸ್ಯೆ ಸಾಮಾನ್ಯವಾಗಿದೆ. ಅಧಿಕಾರಿ ಗಳು ಸಮರ್ಪಕ ನಿರ್ವಹಣೆಗೆ ಗ್ರಾ.ಪಂ. ಆಡಳಿತಗಳೊಂದಿಗೆ ಚರ್ಚಿಸಬೇಕು ಎಂದರು.

ಏಪ್ರಿಲ್ ಅಂತ್ಯದೊಳಗೆ ರೈತರಿಗೆ ಬಿತ್ತನೆಬೀಜ ವಿತರಣೆಗೆ ಕೃಷಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೊರತೆಯಾಗದಂತೆ ಮುಂಜಾ ಗ್ರತೆವಹಿಸಬೇಕು ಎಂದು ಸೂಚಿಸಿದರು.
ಅಧ್ಯಕ್ಷೆ ಪದ್ಮಾ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹಾಲಿಂಗಸ್ವಾಮಿ ಹಾಜರಿದ್ದರು.

ಸಾವಯವ ಕೃಷಿ ತರಬೇತಿ ಶಿಬಿರ
ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಾರ್ಚ್ 9 ಮತ್ತು 10ರಂದು ಸಾವಯವ ಕೃಷಿ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಕೃಷಿ ಇಲಾಖೆ, ಸಾವಯವ ಕೃಷಿ ಮಿಷನ್ ಹಾಗೂ ಲೋಕಧಾರೆ ಸಾವಯವ ಕೃಷಿ ಪರಿವಾರದಿಂದ ಶಿಬಿರ ಆಯೋಜಿಸಲಾಗಿದೆ. 9ರಂದು ಬೆಳಿಗ್ಗೆ 11ಗಂಟೆಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಂ. ಶಿವಮಲ್ಲು ಉದ್ಘಾಟನೆ ನೆರವೇರಿಸಲಿದ್ದಾರೆ. ಎ.ಎಸ್. ಚನ್ನಬಸಪ್ಪ, ಸುಂದರಮ್ಮ ಇತರರು ಪಾಲ್ಗೊಳ್ಳಲಿದ್ದಾರೆ. 10ರಂದು ಸಮಾರೋಪ ನಡೆಯಲಿದೆ.

1 ಕಿ.ಮೀ. ಬಸ್ ಓಡಿದ್ರೆ ಒಂದು ರೂ ನಷ್ಟ!
ಕೆಎಸ್ಆರ್ಟಿಸಿ ಚಾ.ನಗರ ವಿಭಾಗದಿಂದ ಪ್ರತಿನಿತ್ಯ 28,604 ಕಿ.ಮೀ. ದೂರದಷ್ಟು ಬಸ್ಗಳ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, 1 ಕಿ.ಮೀ.ಗೆ ಒಂದು ರೂಪಾಯಿ ನಷ್ಟವಾಗುತ್ತಿದೆ ಎಂದು ವಿಭಾಗದ ವ್ಯವಸ್ಥಾಪಕ ಲಕ್ಷ್ಮೀಪತಿ ತಿಳಿಸಿದರು.

1 ಕಿ.ಮೀ. ಬಸ್ ಓಡಿಸಲು 20 ರೂ ವೆಚ್ಚವಾಗುತ್ತದೆ. ಆದರೆ, 19 ರೂ ಮಾತ್ರವೇ ಸಿಗುತ್ತದೆ. ಪ್ರತ್ಯೇಕವಾಗಿ ಕೆಎಸ್ಆರ್ಟಿಸಿ ಜಿಲ್ಲಾ ವಿಭಾಗದ ಘೋಷಣೆ ನಂತರ ವಾರ್ಷಿಕವಾಗಿ 13.42 ಲಕ್ಷ ರೂ ನಷ್ಟದ ಗುರಿ ನಿಗದಿಪಡಿಸಲಾಗಿದೆ ಎಂದರು.

ಮೈಸೂರು ಗ್ರಾಮೀಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಾರ್ಷಿಕವಾಗಿ 73.41 ಲಕ್ಷ ರೂ ನಷ್ಟವಾಗುತ್ತಿತ್ತು. ಹೊಸ ವಿಭಾಗದ ಮಾನ್ಯತೆ ಸಿಕ್ಕಿದ ನಂತರ ಈ ಪ್ರಮಾಣವನ್ನು 29.36 ಲಕ್ಷ ರೂಗೆ ಕಡಿಮೆಗೊಳಿಸಲಾಗಿದೆ. ಹಂತ ಹಂತವಾಗಿ ನಷ್ಟದ ಪ್ರಮಾಣ ಕಡಿಮೆಗೊಳಿಸಲಾಗುತ್ತದೆ ಎಂದರು.

ಹೊಸ ವಿಭಾಗಕ್ಕೆ ನಷ್ಟದ ಗುರಿ ನಿಗದಿಪಡಿಸುವುದು ಸಾಮಾನ್ಯ. ಬಳಿಕ ನಿಗಮದಿಂದ ಲಾಭದ ಗುರಿ ನಿಗದಿಪಡಿಸಲಾಗುತ್ತದೆ. ಪ್ರಸ್ತುತ ವಿಭಾಗದಿಂದ 81 ಬಸ್ಗಳ ಕಾರ್ಯಾಚರಣೆಯಿದೆ. ಇದರಲ್ಲಿ 27 ಗ್ರಾಮೀಣ ಸೇವೆ ಮತ್ತು 54 ವೇಗದೂತ ಸೇವೆಗೆ ಮೀಸಲಾಗಿವೆ ಎಂದು ವಿವರಿಸಿದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಜಾತ್ರೆಗೆ 152 ಬಸ್ ಓಡಿಸಲಾಗಿತ್ತು. ಇತರೇ ವಿಭಾಗದಿಂದ ಬಸ್ಗಳನ್ನು ಬಾಡಿಗೆ ಪಡೆಯಲಾಗಿತ್ತು. ಒಟ್ಟು 55 ಲಕ್ಷ ರೂ ಸಂಗ್ರಹವಾಗಿದೆ ಎಂದು ಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.