ನವದೆಹಲಿ (ಪಿಟಿಐ): ಇದೇ ತಿಂಗಳು ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದ 15 ಆಟಗಾರರನ್ನು ಶನಿವಾರ ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ತಂಡದಲ್ಲಿ ವಿಕೆಟ್ಕೀಪರ್ ರಿಷಭ್ ಪಂತ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರು ಅವಕಾಶ ಪಡೆಯುವರೇ ಎಂಬ ಕುತೂಹಲ ಗರಿಗೆದರಿದೆ. ವಡೋದರಾದಲ್ಲಿ ಜನವರಿ 11ರಿಂದ ಸರಣಿ ಆರಂಭವಾಗಲಿದೆ.

ಕೆಲವು ವಾರಗಳ ಹಿಂದೆ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತ ತಂಡವು ಜಯಿಸಿತ್ತು. ಆ ಹಿನ್ನೆಲೆಯಲ್ಲಿ ಅಜಿತ್ ಅಗರಕರ್ ನೇತೃತ್ವದ ಆಯ್ಕೆ ಸಮಿತಿಯು ಎರಡು ಅಂಶಗಳನ್ನು ಇಲ್ಲಿ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮೊದಲನೇಯದಾಗಿ ಪಂತ್ ಅವರಿಗೆ ಎರಡನೇ ವಿಕೆಟ್ಕೀಪರ್ ಸ್ಥಾನ ನೀಡುವರೇ ಎಂಬ ಪ್ರಶ್ನೆ. ಮೊದಲ ವಿಕೆಟ್ಕೀಪರ್ ಸ್ಥಾನದಲ್ಲಿ ಇಶಾನ್ ಕಿಶನ್ ಅವರು ಆಡುವುದು ಬಹುತೇಕ ಖಚಿತವಾಗಿದೆ. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಂತ್ ಅವರು ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ ಜಾರ್ಖಂಡ್ ತಂಡದ ಇಶಾನ್ ಮತ್ತು ಉತ್ತರಪ್ರದೇಶದ ವಿಕೆಟ್ಕೀಪರ್ ಧ್ರುವ ಜುರೇಲ್ ಅವರು ಭರ್ಜರಿ ಶತಕ ಸಿಡಿಸಿದ್ದಾರೆ.

ಆರಂಭಿಕ ಬ್ಯಾಟರ್ ಆಗಿ ಆಡುವ ವಿಕೆಟ್ಕೀಪರ್ಗಳನ್ನು ಆಯ್ಕೆ ಮಾಡುವತ್ತ ಅಜಿತ್ ಆಗರಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಹೆಚ್ಚು ಒಲವು ಇದೆ ಎನ್ನಲಾಗಿದೆ. ಆದ್ದರಿಂದ ಈಚೆಗೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಅವರಿಗೆ ಹೆಚ್ಚು ನಿರೀಕ್ಷೆ ಇದೆ.

ಆದರೆ ನೈಜ ಸಂಗತಿ ಏನೆಂದರೆ; ಗಂಭೀರ್ ಮುಖ್ಯ ಕೋಚ್ ಆಗಿ ಬಂದ ನಂತರ ಪಂತ್ ಭಾರತ ತಂಡದಲ್ಲಿ (ಜುಲೈ 2024ರಿಂದ ಡಿಸೆಂಬರ್ 2025) ಕೇವಲ ಒಂದು ಏಕದಿನ ಪಂದ್ಯವನ್ನು ಮಾತ್ರ ಆಡಿದ್ದಾರೆ. ಅಲ್ಲದೇ ಕಳೆದ ಎಂಟು ವರ್ಷಗಳಲ್ಲಿ ಪಂತ್ ಅವರು 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 35ಕ್ಕಿಂತಲೂ ಕಡಿಮೆ ಸರಾಸರಿ ಅವರದ್ದಾಗಿದೆ.

ಗುವಾಹಟಿಯಲ್ಲಿ ಈಚೆಗೆ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಟೆಸ್ಟ್ನಲ್ಲಿಯೂ ಅವರ ಆಟವು ಮುಖ್ಯ ಕೋಚ್ ಅಥವಾ ಆಯ್ಕೆ ಸಮಿತಿಯ ಒಲವು ಗಳಿಸುವಲ್ಲಿ ಸಫಲವಾಗಿರಲಿಲ್ಲ. ಆದರೆ ಅವರಿಗೆ ಮರಳಿ ಅರಳುವ ಒಂದು ಅವಕಾಶವನ್ನು ನೀಡದೇ ಆಯ್ಕೆಯಿಂದ ವಂಚಿತರನ್ನಾಗಿಸುವುದು ಉಚಿತವೇ?

ಎರಡನೇಯ ಸಂಗತಿ; ಮೂರು ಪಂದ್ಯಗಳ ಈ ಸರಣಿಗೆ ವೇಗದ ಬೌಲರ್ಗಳ ಆಯ್ಕೆಯದ್ದಾಗಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಜಸ್ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಿದ್ದ ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಅವರಿಗೂ ಬಿಡುವು ನೀಡುವ ಸಾಧ್ಯತೆ ಇದೆ. ಅದರಿಂದಾಗಿ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ಸಿಗುವುದೇ?

ಹೈದರಾಬಾದಿನ ಸಿರಾಜ್ ಅವರು ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲ ನಾಲ್ಕು ಸುತ್ತುಗಳಲ್ಲಿ ಆಡಿಲ್ಲ. ಅವರು ಈಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸರಣಿಯಲ್ಲಿ ಆಡಿದ್ದರಿಂದ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಪರಿಗಣಿಸಿರಲಿಲ್ಲ. ಹೋದ ವರ್ಷ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಅವರು ಆಡಿರಲಿಲ್ಲ. ಆದ್ದರಿಂದ ಈ ಸರಣಿಯಲ್ಲಿಯೂ ಅವಕಾಶ ಸಿಗದಿದ್ದರೆ ಫಿಫ್ಟಿ–50 ಮಾದರಿಯಿಂದ ಪೂರ್ಣಪ್ರಮಾಣದಲ್ಲಿ ಸಿರಾಜ್ ಅವರನ್ನು ಹೊರಹಾಕಿದಂತೆಯೇ ಎಂಬ ಪ್ರಶ್ನೆ ಕಾಡಲಿದೆ. ಬಂಗಾಳ ತಂಡದಲ್ಲಿ ಆಡುತ್ತಿರುವ ಮೊಹಮ್ಮದ್ ಶಮಿ ಅವರನ್ನು ಪರಿಗಣಿಸುವರೇ ಎಂಬ ಕುತೂಹಲವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.